Advertisement

ಪಾಲಿಕೆಯಲ್ಲಿತೆನೆ ಹೊತ್ತ ಮಹಿಳೆಯೊಂದಿಗೆ ಕೈ ದೋಸ್ತಿ

03:03 PM Jul 29, 2017 | Girisha |

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಪ್ರಸಕ್ತ ಆಡಳಿತದ ನಾಲ್ಕನೇ ಅವಧಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಫಲವಾಗಿ ಮೇಯರ್‌ ಆಗಿ ಕಾಂಗ್ರೆಸ್‌ನ ಸಂಗೀತಾ ಪೋಳ, ಉಪ ಮೇಯರ್‌ ಆಗಿ ಜೆಡಿಎಸ್‌ನ ರಾಜೇಶ ದೇವಗಿರಿ ಅವಿರೋಧ ಆಯ್ಕೆಯಾದರು. 

Advertisement

ಶುಕ್ರವಾರ ಮೇಯರ್‌-ಉಪ ಮೇಯರ್‌ ಆಯ್ಕೆಗೆ ಚುನಾವಣೆ ನಡೆಯಿತು. ಪ್ರಾದೇಶಿಕ ಆಯುಕ್ತ ಜಯರಾಮ್‌ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ನಾಮಪತ್ರ ಸಲ್ಲಿಕೆ ಹಾಗೂ ಚುನಾವಣೆ ಪ್ರಕ್ರಿಯೆ ಬಳಿಕ ಫಲಿತಾಂಶ ಪ್ರಕಟಿಸಿದರು. ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್‌ ಸ್ಥಾನ ಮೀಸಲಾಗಿದ್ದರೆ, ಉಪ ಮೇಯರ್‌ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿತ್ತು. ಮಹಾನಗರ ಪಾಲಿಕೆಯ 35 ಸದಸ್ಯ ಬಲದಲ್ಲಿ ಪರಿಶಿಷ್ಟ ಜಾತಿಯ ಸಂಗೀತಾ ಪೋಳ ಏಕೈಕ ಸದಸ್ಯೆ. ಹೀಗಾಗಿ ಮೇಯರ್‌ ಸ್ಥಾನಕ್ಕೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. 

ನಿರೀಕ್ಷೆಯಂತೆ ಅವಿರೋಧ ಆಯ್ಕೆಯಾದ ಸಂಗೀತಾ ಪೋಳ, 4 ವರ್ಷದಲ್ಲಿ 2ನೇ ಬಾರಿಗೆ ಮೇಯರ್‌ ಗದ್ದುಗೆ ಏರಿದ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾರೆ. ಇನ್ನು ಉಪ ಮೇಯರ್‌ ಸ್ಥಾನ ಹಿಂದುಳಿದ “ಅ’ ವರ್ಗಕ್ಕೆ ಮೀಸಲಾಗಿದ್ದು, ನಾಲ್ಕಾರು ಜನರು ಆಕಾಂಕ್ಷಿಗಳಾಗಿದ್ದರು. ಇದಕ್ಕಾಗಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರು ಪಕ್ಷಗಳಲ್ಲಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್‌ನ ಕೈ ಚಳಕದ ಪರಿಣಾಮ ಜೆಡಿಎಸ್‌ ಸದಸ್ಯ ರಾಜೇಶ ದೇವಗಿರಿ ಒಬ್ಬರೇ ನಾಮಪತ್ರ ಸಲ್ಲಿಸಿದರು.

ಹೀಗಾಗಿ ಇವರ ಆಯ್ಕೆಯೂ ಅವಿರೋಧವಾಗಿ ನಡೆಯಿತು. ಮೇಯರ್‌ ಆಗಿರುವ ಸಂಗೀತಾ ಪೋಳ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಮೊದಲ ಅವಧಿಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾದಾಗ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ, ಮೇಯರ್‌ ಆಗಿದ್ದರು. ಇದೀಗ ಕಾಂಗ್ರೆಸ್‌ನಿಂದ ಎರಡನೇ ಸಲ ಮೇಯರ್‌ ಆಗಿದ್ದಾರೆ. ಜನರ ಆಶೀರ್ವಾದದಿಂದ ಎರಡನೇ ಬಾರಿಗೆ ಮೇಯರ್‌ ಸ್ಥಾನ ದೊರಕಿದೆ. ಈ ಅವಕಾಶ ಸದ್ಬಳಕೆ ಮಾಡಿಕೊಂಡು, ಪಕ್ಷಭೇದವಿಲ್ಲದೆ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಪ್ರಗತಿಯೇ ನನ್ನ ಮೂಲಮಂತ್ರ.  ಸಂಗೀತಾ ಪೋಳ, ನೂತನ ಮೇಯರ್‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನದ ವಿವಿಧ ಹಂತದಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ. ನಗರದ ಜನರಿಗೆ 24×7 ಕುಡಿಯುವ ನೀರಿನ ಯೋಜನೆ ಅನುಷ್ಠಾನ ಆದ್ಯತೆ ನೀಡುತ್ತೇನೆ. ಪಾಲಿಕೆಯ ಸಾಮಾನ್ಯ ಸಭೆ ನಿಯಮಿತವಾಗಿ ನಡೆಸಿ ಜನತೆಯ ಸಮಸ್ಯೆಯ ಕುರಿತು ಗಂಭೀರವಾಗಿ ಚರ್ಚಿ ಚರ್ಚಿಸಲು ಮುಂದಾಗುತ್ತೇವೆ.

ರಾಜೇಶ ದೇವಗಿರಿ, ನೂತನ ಉಪ ಮೇಯರ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next