Advertisement

ಹಂಚಿಹಳ್ಳಿ ಪಿಡಿಒ ನಕಲಿ ಸಹಿ: ಕೆಆರ್ ಎಸ್ ಕಾರ್ಯಕರ್ತರಿಂದ ಆರೋಪ, ದೂರು

04:37 PM Sep 18, 2022 | Team Udayavani |

ಕೊರಟಗೆರೆ: ಹಂಚಿಹಳ್ಳಿ ಗ್ರಾಪಂ ಪಿಡಿಒ ಮೈಲಣ್ಣ ಹಾಜರಾತಿಯಲ್ಲಿ ನಕಲಿ ಸಹಿ ಮಾಡಿದ್ದು, ಅವರ ವಿರುದ್ದ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆರೋಪಿಸಿ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ತಾಪಂ ಇಒ ದೊಡ್ಡಸಿದ್ದಯ್ಯ ಅವರಿಗೆ ಮನವಿ ಸಲ್ಲಿಸಿದರು.

Advertisement

ಪಟ್ಟಣದ ತಾಪಂ ಮುಂಬಾಗದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ತಾಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಪಂಯ ಪಿಡಿಒ ಮೈಲಣ್ಣ ಅವರು ಕಚೇರಿಗೆ ಬಾರದೇ ರಜೆ ಹಾಕಿಕೊಂಡು ಹೋಗಿದ್ದೇನೆ ಎಂದು ತಿಳಿಸಿದ್ದು, ನಂತರ ಗ್ರಾಪಂಗೆ ನಮ್ಮ ಕಾರ್ಯಕರ್ತರು ಭೇಟಿ ನೀಡಿದ್ದಾಗ ಕಚೇರಿಯಲ್ಲಿ ನಕಲಿ ಸಹಿ ಹಾಕಿರುವುದು ಕಂಡುಬಂದಿದೆ ಎಂದು ಕೆಆರ್ ಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಕೆಆರ್ ಎಸ್ ತಾಲೂಕು ಅಧ್ಯಕ್ಷ ರವಿಕುಮಾರ್ ಮಾತನಾಡಿ, ಮಲ್ಲೇಶಪುರ ಕೆರೆಗೆ ವಿಶಾಲ್ ನ್ಯಾಚುರಲ್ ಫುಡ್ ಫ್ಯಾಕ್ಟರಿಯಿಂದ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿರುವ ಬಗ್ಗೆ ಗ್ರಾಪಂಗೆ ದೂರು ನೀಡಲು ಹೋಗಿದ್ದ ಸಂದರ್ಭದಲ್ಲಿ ಗ್ರಾಪಂಯಲ್ಲಿ ನಕಲಿ ಸಹಿ ಹಾಕಿ ರಜೆಯ ಮೇಲೆ ಹೋಗಿದ್ದೇನೆ ಎಂದು ಸುಳ್ಳು ಹೇಳುತ್ತಾರೆ. ಇನ್ನೂ ಗ್ರಾಪಂಯಲ್ಲಿ ಸಾರ್ವಜನಿಕರ ಇಸ್ವತ್ತು ಮಾಡಿಕೊಡಲು 10 ಸಾವಿರ ಲಂಚ ಕೊಟ್ಟರೆ ಮಾತ್ರ ಇಸ್ವತ್ತು ಆಗುತ್ತದೆ. ಈಗೆ ಅನೇಕ ಆರೋಪಗಳು ಕೇಳಿ ಬರುತ್ತಿದ್ದು, ಶಿಸ್ತು ಕ್ರಮಕೈಗೊಳ್ಳುವಂತೆ ತಾಪಂ ಇಒ ಇವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಸಿ. ರವಿಕುಮಾರ್, ಕೆ.ಆರ್.ಎಸ್ ಪಕ್ಷದ ಉಪಾಧ್ಯಕ್ಷ ನರಸಿಂಹಮೂರ್ತಿ ರೈತ ಘಟಕದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಜನಾರ್ಧನ್, ಕಾರ್ಯದರ್ಶಿ ನಂಜೇಶ್, ಪರ್ವೀಜ್ ಅಹಮದ್, ರವಿಕುಮಾರ್, ಪುನೀತ್, ಸುರೇಶ್, ನಟರಾಜು, ಪುಟ್ಟಸ್ವಾಮಿ, ಮಹೇಶ್, ರಂಗರಾಜು, ಕಾರ್ಯಕರ್ತರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next