Advertisement

ಹಾನಗಲ್‌: ಬಿಜೆಪಿಯಲ್ಲಿ  ಭುಗಿಲೆದ್ದ ಅಸಮಾಧಾನ

10:28 PM Oct 07, 2021 | Team Udayavani |

ಹಾನಗಲ್‌: ಹಾನಗಲ್‌ ವಿಧಾನಸಭಾ ಉಪಚುನಾವ ಣೆಗೆ ಶಿವರಾಜ ಸಜ್ಜನರ ಹೆಸರು ಘೋಷಣೆಯಾಗುತ್ತಿದ್ದಂತೆ ತಾಲೂಕಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸಂಸದ ಶಿವಕುಮಾರ್‌ ಉದಾಸಿ ಪತ್ನಿ ರೇವತಿ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Advertisement

ಪಟ್ಟಣದ ಬಿಜೆಪಿ ಕಾರ್ಯಾಲಯ ಬಂದ್‌ ಮಾಡಿದ ಕಾರ್ಯಕರ್ತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ನಂತರ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಬಿಜೆಪಿ ಎಲ್ಲ ಪದಾಧಿ ಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಘೋಷಣೆ ಮಾಡಿದರು.

ಅಕ್ಕಿಆಲೂರು, ಆಡೂರು, ಬೊಮ್ಮನಹಳ್ಳಿ  ಸಹಿತ ತಾಲೂಕಿನಾದ್ಯಂತ  ಪ್ರತಿಭಟನೆ ನಡೆಸಿದರು. ಶಿವರಾಜ್‌ಗೆ ಟಿಕೆಟ್‌ ನೀಡುವುದಾದರೆ ನಾವು ಕೆಲಸ ಮಾಡುವುದಿಲ್ಲ. ಸ್ಥಳೀಯರಿಗೆ ನ್ಯಾಯ ಒದಗಿಸಿ ಕೊಡಿ ಎಂದು ವರಿಷ್ಠರಿಗೆ  ಮನವಿ ಮಾಡಿದರು.

ಮಾಜಿ ಸಚಿವ ದಿ| ಸಿ.ಎಂ.ಉದಾಸಿ  ಸಮಾಧಿ ಬಳಿ ಸೇರಿದ  ಕಾರ್ಯಕರ್ತರು ನೋವು ತೋಡಿಕೊಂಡು ಕಣ್ಣೀರಿಟ್ಟರು. ಅಲ್ಲದೆ, ಮಾರುತಿ ತಾಂದಳೆ ಎಂಬ ಕಾರ್ಯಕರ್ತ ಹಾನಗಲ್ಲ ಕುಮಾರೇಶ್ವರ ವೃತ್ತದಿಂದ ಮಠದವರೆಗೆ ಅರೆಬೆತ್ತಲೆಯಾಗಿ ದೀಡ ನಮಸ್ಕಾರ ಹಾಕಿದರು.

ಆಕ್ರೋಶಿತರು ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಹಾಗೂ ರಾಜ್ಯ ನಾಯಕರಿಗೆ ಧಿಕ್ಕಾರ ಕೂಗಿದರು.

Advertisement

ಇಂದು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ :

ಬೆಂಗಳೂರು: ಸಿಂದಗಿ ಹಾಗೂ ಹಾನಗಲ್‌ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಸಿಂದಗಿಯಲ್ಲಿ ರಮೇಶ್‌ ಭೂಸನೂರು  ಹಾಗೂ ಹಾನಗಲ್‌ನಲ್ಲಿ ಶಿವರಾಜ್‌ ಸಜ್ಜನ್‌ ಅವರು ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿರಲಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಮಾನೆ ನಾಮಪತ್ರ ಸಲ್ಲಿಕೆ:

ಹಾನಗಲ್‌ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.

ಜೆಡಿಎಸ್‌ ನಾಮಪತ್ರ ಸಲ್ಲಿಕೆ:

ಹಾನಗಲ್‌ ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಅವರು  ನಿಖೀಲ್‌ ಕುಮಾರಸ್ವಾಮಿ ಜತೆ ಮೆರವಣಿಗೆಯಲ್ಲಿ ತೆರಳಿ ಗುರುವಾರ ನಾಮಪತ್ರ ಸಲ್ಲಿಸಿದರು. ಸಿಂದಗಿಯಲ್ಲಿ ನಾಜಿಯಾ ಅಂಗಡಿ ಅವರು ಎಚ್‌.ಡಿ. ಕುಮಾರಸ್ವಾಮಿ ಜತೆಯಲ್ಲಿ ನಾಮಪತ್ರ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next