Advertisement
ಶೋಭಾಯಾತ್ರೆ: ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವಿವಿಧ ಜಾನಪದ ಕಲಾ ತಂಡಗಳಿಂದ ಶೋಭಾಯಾತ್ರೆ ನಡೆಯಲಿದೆ. ವಿವಿಧ ತಾಲೂಕುಗಳಿಂದ ವಿವಿಧ ಪ್ರಕಾರದ ಜಾನಪದ ಕಲಾ ತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಲಿದೆ. ಇದಾದ ನಂತರ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ನೆರವೇರಲಿದೆ.
ಆಹ್ವಾನಿತರು ಉಪಸ್ಥಿತರಿರಲಿದ್ದಾರೆ. ಇದನ್ನೂ ಓದಿ:ಬಳ್ಳಾರಿ ಪಾಲಿಕೆ ನೂತನ ಆಯುಕ್ತರಾಗಿ ಪ್ರೀತಿ ಗೆಹ್ಲೋಟ್ ನಿಯೋಜನೆ
Related Articles
ಚಂದ್ರಶೇಖರ್ ಮತ್ತು ತಂಡದವರಿಂದ ಡೊಳ್ಳುಕುಣಿತ, ಬಳ್ಳಾರಿಯ ಎಂ.ನಾಗರಾಜ ಸ್ವಾಮಿ ಮತ್ತು ತಂಡದವರಿಂದ ವೀರಗಾಸೆ ಹಾಗೂ ದೊಡ್ಡಬಸಪ್ಪ ಮತ್ತು ತಂಡದವರಿಂದ ನಾಡಗೀತೆ, ಹಳೇದರೊಜಿ ಅಶ್ವರಾಮಣ್ಣ ಮತ್ತು ತಂಡದವರಿಂದ ಹಗಲುವೇಷ
ಸಿರಗುಪ್ಪ ದೊಡ್ಡರಾಮಣ್ಣ ಮತ್ತು ತಂಡದವರಿಂದ ಸಿಂದೋಳ್ ಕುಣಿತ, ಹೊಸಪೇಟೆಯ ಶರಣಪ್ಪ ಮತ್ತು ತಂಡ ಕಹಳೆ ವಾದನ, ನಾರಾಯಣಪ್ಪ ಮತ್ತು ತಂಡದವರಿಂದ ನಾದಸ್ವರ, ಆಂಜನೇಯ ಮತ್ತು ತಂಡದವರಿಂದ ಡೊಳ್ಳು ಕುಣಿತ, ಕಂಪ್ಲಿಯ ಕೆ.ಅಂಜಲಿ ಮತ್ತು ತಂಡದವರಿಂದ ಹಕ್ಕಿ ಪಿಕ್ಕಿ ಬುಡಕಟ್ಟು ನೃತ್ಯ, ಹೊಸಪೇಟೆಯ ಏಸುಪ್ ಮತ್ತು ತಂಡದವರಿಂದ ಮರಗಾಲುಕುಣಿತ, ಅಮೃತಾ ಮತ್ತು ತಂಡದವರಿಂದ ಶಾಸ್ತ್ರೀಯ ನೃತ್ಯ, ಹಡಗಲಿ ಮಲ್ಲಯ್ಯ ಮತ್ತು ತಂಡದವರ ಗೊರವರ ಕುಣಿತ, ಕೊಟ್ಟೂರು ವೀರಭದ್ರೇಶ್ವರ ವಾದ್ಯವೃಂದ ನಂದಿಧ್ವಜ ಕುಣಿತ, ಹರಪನಹಳ್ಳಿ ವಿಶ್ವಕಲಾ ರೈತ ಭಜನಾ ಸಂಘದಿಂದ
ಕೀಲು ಕುದುರೆ, ಕೂಡ್ಲಿಗಿ ದುರುಗಮ್ಮ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ ಪ್ರದರ್ಶನಗಳು ಈ ಬಾರಿಯ ಹಂಪಿ ಉತ್ಸವದಲ್ಲಿ ನಡೆಯಲಿವೆ.
Advertisement
ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಸಂಸದರಾದ ವೈ. ದೇವೇಂದ್ರಪ್ಪ, ಜಿ.ಎಂ. ಸಿದ್ದೇಶ್ವರ, ಕರಡಿ ಸಂಗಣ್ಣ, ಸೈಯದ್ನಾಸೀರ್ ಹುಸೇನ್, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಬಿ.ನಾಗೇಂದ್ರ, ಎನ್. ವೈ. ಗೋಪಾಲಕೃಷ್ಣ, ಭೀಮಾನಾಯ್ಕ ಎಲ್. ಬಿ.ಪಿ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿ. ಕರುಣಾಕರರೆಡ್ಡಿ, ಜಿ. ಸೋಮಶೇಖರರೆಡ್ಡಿ, ಎಂ.ಎಸ್.
ಸೋಮಲಿಂಗಪ್ಪ, ಜೆ.ಎನ್.ಗಣೇಶ್, ಡಾ. ಚಂದ್ರಶೇಖರ ಬಿ.ಪಾಟೀಲ, ಶಾಸಕರು ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಾದೇಶಿಕ ಆಯುಕ್ತ ಎನ್.ವಿ. ಪ್ರಸಾದ್, ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಎಸ್. ನಂಜುಂಡಸ್ವಾಮಿ ಮತ್ತು ಕಎಸ್.ರಂಗಪ್ಪ, ಕಾಳಿ ಆಗಮಿಸಲಿದ್ದಾರೆ.