Advertisement

ಹಂಪಿ ಹಿರಿಮೆಗೆ ಮತ್ತೂಂದು ಗರಿ

12:30 AM Dec 29, 2018 | Team Udayavani |

ನವದೆಹಲಿ: ವಿಜಯನಗರದ ಅರಸರ ಗತ ವೈಭವದ ಕುರುಹಾಗಿರುವ ಹಂಪಿಗೆ,ಪ್ರವಾಸಿಗರ ಮೇಲೆ ಪ್ರಭಾವ ಬೀರುವ ಏಷ್ಯಾದ ಅಗ್ರ ಐದು ಪ್ರವಾಸಿ ತಾಣಗಳಲ್ಲೊಂದು ಎಂಬ ಹಿರಿಮೆ ಸಿಕ್ಕಿದೆ. 

Advertisement

ಏಷ್ಯಾದಲ್ಲಿನ ಪಾರಂಪರಿಕ ಪ್ರವಾಸಿ ತಾಣಗಳ ಬಗ್ಗೆ ವಿಶ್ವದ ನಾನಾ ಪ್ರವಾಸಿಗರು ಹಾಗೂ ಪ್ರವಾಸಿ ಬ್ಲಾಗರ್‌ಗಳುಳ್ಳ ಸಮಿತಿಯೊಂದು ಆನ್‌ಲೈನ್‌ ಮೂಲಕ ಮಾಡಿದ ಮತದಾನದಲ್ಲಿ ಹಂಪೆಗೆ “2019ರಲ್ಲಿ ಏಷ್ಯಾಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆ’ ಪ್ರಾಪ್ತವಾಗಿದೆ. ಈ ಗೌರವ ಪಡೆದ ಇತರ ನಾಲ್ಕು ರಾಷ್ಟ್ರಗಳು ಶ್ರೀಲಂಕಾ, ಒಮನ್‌, ಭೂತಾನ್‌, ಮಂಗೋಲಿಯಾ ಹಾಗೂ ಜಪಾನ್‌.
 
ಅಭಿವೃದ್ಧಿಗೊಳ್ಳುತ್ತಿರುವ ವಿವಿಧ ಪಾರಂಪರಿಕ ಪ್ರವಾಸಿ ಸ್ಥಳಗಳನ್ನು ಆನ್‌ಲೈನ್‌ ಮತದಾನಗಳ ಮೂಲಕ ಪಟ್ಟಿ ಮಾಡಿ ಆ ಮೂಲಕ ಟಾಪ್‌ 5 ಪ್ರವಾಸಿ ತಾಣಗಳಿಗೆ ಪ್ರಶಸ್ತಿ ವಿತರಿಸುವ ಕೆಲಸವನ್ನು “ಟ್ರಾವೆಲ್‌ ಲೆಮಿಂಗ್‌ ಡಾಟ್‌ ಕಾಮ್‌’ ಎಂಬ ಸಂಸ್ಥೆ ಹಲವಾರು ವರ್ಷಗಳಿಂದ ನಡೆಸುತ್ತಾ ಬಂದಿದೆ. ಈ ಸಂಸ್ಥೆಯ 7,50,000ದಷ್ಟು ಸದಸ್ಯರು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮತದಾನ ಮಾಡಿ ಈ ಪಟ್ಟಿಯ ತಯಾರಿಕೆಗೆ ಸಹಕರಿಸುತ್ತಾರೆ. ಈ ಸಮಸ್ತ ಪ್ರಕ್ರಿಯೆಯನ್ನು ಮೂರು ತೀರ್ಪುಗಾರರು ನಿರ್ವಹಿಸಿ ಅಂತಿಮ ಪಟ್ಟಿ ತಯಾರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next