Advertisement

ಅತ್ಯಾಧುನಿಕ ಎಲ್‌ಹೆಚ್‌ಬಿ ಕೋಚ್‌ಗಳೊಂದಿಗೆ ಹಂಪಿ ಎಕ್ಸ್ ಪ್ರೆಸ್ ಓಡಾಟ

07:43 PM Jun 24, 2022 | Team Udayavani |

ಹೊಸಪೇಟೆ: ಅತ್ಯಾಧುನಿಕ ಎಲ್.ಹೆಚ್.ಬಿ ಕೋಚ್‌ಗಳ ಜೋಡಣೆಯೊಂದಿಗೆ ಹಂಪಿ ಎಕ್ಸ್ ಪ್ರೆಸ್ ರೈಲು ಗಾಡಿಯು ಹುಬ್ಬಳ್ಳಿ ಹಾಗೂ ಮೈಸೂರು ನಡುವೆ ಸಂಚಾರ ಆರಂಭಿಸಿದೆ.

Advertisement

ಹುಬ್ಬಳ್ಳಿ ಮೈಸೂರು ಹಂಪಿ ಎಕ್ಸ್ ಪ್ರೆಸ್ ಗಾಡಿ ಸಂಖ್ಯೆ (16591/92) ಅತ್ಯಾಧುನಿಕ ಲಿಂಕ್ ಹಾಪ್‌ಮನ್ ಕೋಚ್ ಜೋಡಣೆಯೊಂದಿಗೆ ಸಂಚಾರ ನಡೆಸಲಿರುವ ರೈಲು ಗಾಡಿಗೆ ಹುಬ್ಬಳ್ಳಿಯಲ್ಲಿ ಜೂ. ೨೩ರಂದು ಚಾಲನೆ ನೀಡಲಾಗಿದೆ.

ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ, ಹಂಪಿ ಎಕ್ಸ್ಪ್ರೆಸ್ ರೈಲಿಗೆ ಪ್ರಥಮವಾಗಿ ಈ ಸೌಲಭ್ಯ ಒದಗಿಸುವ ಮೂಲಕ ಪ್ರಯಾಣಿಕರ ಅನುಕೂಲ ಮಾಡಿಕೊಟ್ಟಿದೆ. ದೇಶದ ಮಹಾನಗರಗಳ ನಡುವೆ ಸಂಚಾರ ಮಾಡುವ ರೈಲುಗಳಿಗೆ ಮಾತ್ರ ಜೋಡಿಸಲಾಗುವ ಈ ಕೋಚುಗಳನ್ನು ಇದೀಗ ಹಂಪಿ ಎಕ್ಸ್ ಪ್ರೆಸ್ ರೈಲಿಗೆ ಅಳವಡಿಸಲಾಗಿದೆ. ಪ್ರಸ್ತುತ ವಾರದಲ್ಲಿ 4 ದಿನಗಳು ಮಾತ್ರ ಪ್ರಯಾಣಿಕರಿಗೆ ಎಲ್.ಹೆಚ್.ಬಿ ಕೋಚುಗಳ ಸೇವೆ ಸೌಲಭ್ಯ ಸಿಗಲಿದೆ. ಉಳಿದ 3 ದಿನಗಳಲ್ಲಿ ಸಾಂಪ್ರದಾಯಿಕ ಕೋಚ್‌ಗಳೊಂದಿಗೆ ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಎಲ್.ಹೆಚ್.ಬಿ ಕೋಚ್‌ಗಳನ್ನು ಜೋಡಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗ ತಿಳಿಸಿದೆ.

ಕೋಚ್‌ನಲ್ಲಿ ಏನಿದೆ ?
ಜರ್ಮನ್ ದೇಶದ ತಂತ್ರಜ್ಞಾನದ ಸಹಯೋಗದಲ್ಲಿ ಎಲ್.ಹೆಚ್.ಬಿ ಕೋಚ್‌ಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಗಂಟೆಗೆ 130 ಕಿಮೀ ವೇಗದಲ್ಲಿ ರೈಲು ಸಂಚಾರ ಮಾಡಲಿದೆ. ಸಾಂಪ್ರದಾಯಿಕ ರೈಲಿನ ಕೋಚುಗಳಿಗಿಂತಲೂ ಹೆಚ್ಚು ವಿಶಾಲವಾಗಿರುವ ಕೋಚ್‌ಗಳಲ್ಲಿ ಆರಾಮದಾಯಕ ಆಸನ ವ್ಯವಸ್ಥೆ ಇರುತ್ತದೆ. ಪ್ರತಿ ಕೋಚಿನಲ್ಲಿ ಹೆಚ್ಚುವರಿಯಾಗಿ ೮ ಆಸನಗಳಿದ್ದು ಹಳೆಯ ಹಂಪಿ ಎಕ್ಸ್ಪ್ರಸ್‌ಗಾಡಿಗಿಂತ ೧೫೦ ಹೆಚ್ಚುವರಿ ಸೀಟುಗಳು ಪ್ರಯಾಣಿಕರಿಗೆ ಲಭ್ಯವಾಗುತ್ತವೆ. ಸ್ಟೀಲ್ ನಿರ್ಮಿತ ಕೋಚ್‌ಗಳ ತೂಕ ಹಗುರವಾಗಿರುವುದರಿಂದ ಕಡಿಮೆ ಶಬ್ದ ಹಾಗೂ ಹೆಚ್ಚು ವೇಗವಾಗಿ ಗಾಡಿ ಚಲಿಸುತ್ತದೆ. ಪ್ರಯಾಣಿಕರ ಸುರಕ್ಷತೆಯ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿದ್ದು, ಅಫಘಾತಗಳು ಪ್ರಮಾಣ ಅತ್ಯಂತ ಕಡಿಮೆ ಮಟ್ಟದಲ್ಲಿರುತ್ತದೆ.

ಅಭಿನಂದನೆ
ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಹಂಪಿ ಎಕ್ಸ್ಪ್ರೆಸ್ ರೈಲಿಗೆ ಪ್ರಪ್ರಥಮವಾಗಿ ಈ ಸೌಲಭ್ಯ ಒದಗಿಸಿರುವ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ವಿಜಯನಗರ ರೈಲ್ವೆ ಅಭಿವೃಧ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ ಯಮುನೇಶ್ ಹಾಗೂ ಕಾಯದರ್ಶಿ ಕೆ ಮಹೇಶ್ ಅಭಿನಂದನೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next