ಹೊಸದಿಲ್ಲಿ: ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು “ಸ್ವದೇಶ್ ದರ್ಶನ್’ನ 2ನೇ ಆವೃತ್ತಿಯನ್ನು ಆರಂಭಿಸಿದ್ದು, ಕರ್ನಾಟಕದ ಹಂಪಿ ಮತ್ತು ಮೈಸೂರು ನಗರವನ್ನು ಆಯ್ಕೆ ಮಾಡಲಾಗಿದೆ.
Advertisement
ಪ್ರವಾಸೋದ್ಯಮದ ಅಭಿವೃದ್ಧಿಯೇ ಈ ಯೋಜನೆಯ ಉದ್ದೇಶ. 2ನೇ ಆವೃತ್ತಿಯಲ್ಲಿ 19 ರಾಜ್ಯಗಳ 36 ಸ್ಥಳಗಳ ಅಭಿವೃದ್ಧಿಗೆ ಸಚಿವಾಲಯ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯೋಜನೆಯಲ್ಲಿ ಹಂಪಿ ಮತ್ತು ಮೈಸೂರು ಸೇರಿಸಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ.
ಇದು ಪ್ರವಾಸೋದ್ಯಮ ಮತ್ತು ಥೀಮ್ ಆಧಾರಿತ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಹಕಾರಿ ಎಂದು ಹೇಳಿದ್ದಾರೆ.