Advertisement

ಹಳ್ಳಿಹೊಳೆ: ಮನೆ ಕಳ್ಳತನದ ಆರೋಪಿ ಬಂಧನ

08:44 PM Jun 21, 2022 | Team Udayavani |

ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಕೆಳಮದುರೆ ಮನೆ ರಾಘವೇಂದ್ರ ಯಡಿಯಾಳ ಅವರ ಮನೆಗೆ ಜೂ.18ರ ರಾತ್ರಿ ಕಳ್ಳತನ ಮಾಡಿದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು 24 ಗಂಟೆಯ ಒಳಗೆ ಬಂಧಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಪ್ರಾಶಂಸನೆಗೆ ಒಳಗಾಗಿದ್ದಾರೆ.

Advertisement

ಆರೋಪಿ ಬೈಂದೂರು ತಾಲೂಕು ಉಪ್ಪುಂದದ ಮಯ್ಯರಕೇರಿಯ ಶ್ರೀಧರ ಮಡಿವಾಳ(38)ನನ್ನು ಸಿದ್ದಾಪುರದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿ ಬಳಿ ಇದ್ದ 1,30,000 ರೂ.ಬೆಲೆ ಬಾಳುವ 28 ಗ್ರಾಂ ತೂಕದ 2 ಚಿನ್ನದ ಬಳೆ, 1,50,000 ರೂ.ಬೆಲೆ ಬಾಳುವ 30ಗ್ರಾಂ ತೂಕದ ಮಲ್ಲಿಗೆ ಮಿಟ್ಟಿಯ ಸರ, 20ಸಾವಿರ ಬೆಲೆ ಬಾಳುವ 4ಗ್ರಾಂ ತೂಕದ ಚಿನ್ನದ ಉಂಗುರ, ಹಿತ್ತಾಳೆ ಕರಡಿಗೆ ಮತ್ತು ನಗದು ಸಹಿತ ಕಳವಾದ ಎಲ್ಲಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಶ್ರೀಧರ ಮಡಿವಾಳ ಕಳ್ಳತನ ಮಾಡಿದ ಬಳಿಕ ಸಿದ್ದಾಪುರಕ್ಕೆ ಬಂದು ಲಾಡ್ಜ್ ಒಂದರಲ್ಲಿ ರೂಂ ಮಾಡಿಕೊಂಡಿದ್ದ.

ಕುಂದಾಪುರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಶ್ರೀಕಾಂತ ಕೆ., ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಶಂಕರನಾರಾಯಣ ಪಿಎಸ್‌ಐಗಳಾದ ಶ್ರೀಧರ್‌ ನಾಯ್ಕ, ಸುದರ್ಶನ್‌, ಸಿಬಂದಿಗಳಾದ ಸೀತರಾಮ ಶೆಟ್ಟಿಗಾರ್‌, ರಾಘವೇಂದ್ರ, ಗೋಪಾಲಕೃಷ್ಣ, ಮಂಜುನಾಥ್‌, ರಾಕೇಶ್‌, ಅನಿಲ್‌ಕುಮಾರ್‌, ವಿಲ್ಪೆಡ್‌ ಡಿಸೋಜ್‌, ವಿಲಾಸ್‌ ರಾಥೋಡ್‌, ಆಲಿಂಗರಾಯ ಕಾಟೆ, ಚಂದ್ರಕುಮಾರ್‌, ಜಯರಾಮ ನಾಯ್ಕ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next