Advertisement
ಆಂದೋಲನ :
Related Articles
Advertisement
2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಶಾಸಕ ರಾಗಿದ್ದರೂ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದರು. 2016ರ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಎಲ್ಲ ಜಿ.ಪಂ. ಸ್ಥಾನವನ್ನು ಬಿಜೆಪಿ ಗೆಲ್ಲುವಂತೆ ಮಾಡಿದ್ದರು. ಕೇವಲ ಒಂದು ತಾ.ಪಂ. ಬಿಜೆಪಿ ಕಳೆದುಕೊಂಡರೆ ಉಳಿದೆಲ್ಲೆಡೆ ಬಿಜೆಪಿ ಗೆದ್ದಿತ್ತು.
ಲಾಬಿ ಇಲ್ಲ :
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದ ಹೆಸರುಗಳಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರದ್ದೂ ಒಂದು. ಆದರೆ ಬೆಂಗಳೂರು ಅಥವಾ ದಿಲ್ಲಿಗೆ ಹೋಗಿ ಹೈಕಮಾಂಡ್ ಹಾಗೂ ಪ್ರಮುಖರ ಬಳಿ ಸಚಿವ ಸ್ಥಾನಕ್ಕೆ ಲಾಬಿ ಮಾಡದಿರುವುದೇ ಶೆಟ್ಟರಿಗೆ ಮುಳುವಾಯಿತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅವರು ಇನ್ನು ಮುಂದೆಯೂ ಲಾಬಿ ಮಾಡುವುದಿಲ್ಲ ಎನ್ನುತ್ತಾರೆ ಅವರ ಬೆಂಬಲಿಗರು.
ಹುಸಿಯಾದ ನಿರೀಕ್ಷೆ :
ಏಳು ಸಚಿವರ ಸೇರ್ಪಡೆ ಎಂದಾದಾಗ ಒಮ್ಮೆ ಹಾಲಾಡಿಯವರಿಗೆ ದೊರೆಯಬಹುದು ಎಂಬ ನಿರೀಕ್ಷೆ ಇತ್ತು. ಈ ಹಿಂದಿನ ಭರವಸೆಗಳೆಲ್ಲ ಕಾರ್ಯಕರ್ತರ ಮನದಲ್ಲಿ ಒಮ್ಮೆ ಹಾದಹೋಯಿತು. ಹಾಲಾಡಿ ಬೆಂಬಲಿಗರ ಎಲ್ಲ ನಿರೀಕ್ಷೆಗಳೂ ಪ್ರತಿ ಬಾರಿ ಸಂಪುಟ ವಿಸ್ತರಣೆ ಸಂದರ್ಭ ಹುಸಿಯಾಗಿವೆ. ಹಾಲಾಡಿಯವರಿಗೆ ಸಚಿವ ಸ್ಥಾನ ದೊರೆಯುವುದು ಬಿಡಿ, ಪಕ್ಷದ ವರಿಷ್ಠರು ಸಚಿವ ಸಂಪುಟದ ಪ್ರಮಾಣವಚನಕ್ಕೆ ಆಹ್ವಾನವನ್ನೂ ನೀಡುತ್ತಿಲ್ಲ. ಮುಂದಿನ ಬಾರಿ ಅವಕಾಶ ನೀಡಲಾಗುವುದು ಎಂಬಂತಹ ಮಾತುಗಳೇ ಸಮಾಧಾನಕ್ಕಾಗಿ ಪ್ರತಿ ಬಾರಿ ಕೇಳಿ ಬರುತ್ತಿದೆ. ಸಹಜವಾಗಿ ಕಾರ್ಯಕರ್ತರಲ್ಲಿ ಆಕ್ರೋಶ ಮಡುಗಟ್ಟಿದೆ. ಬುಧವಾರ ಇಡೀ ದಿನ ಪಕ್ಷದ ಕಚೇರಿ ಬಿಕೋ ಎನ್ನುತ್ತಿತ್ತು.
ರಾಜ್ಯದಲ್ಲೇ ಅಧಿಕ ಮತಗಳ ಲೀಡ್ :
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ರಾಜ್ಯದಲ್ಲೇ ಎರಡನೇ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದ ಶಾಸಕ ಹಾಲಾಡಿಯವರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲೇ ಬಿಜೆಪಿ ಅಭ್ಯರ್ಥಿಗೆ 70ಸಾವಿರಕ್ಕೂ ಅಧಿಕ ಮತಗಳ ಮೂಲಕ ಅತೀ ಹೆಚ್ಚು ಮತಗಳ ಅಂತರದ ಲೀಡ್ ಕೊಟ್ಟ ಕ್ಷೇತ್ರ ಕುಂದಾಪುರ.