Advertisement

ಮುಂಬಯಿ: ನಾಪತ್ತೆಯ ಮಂದಿ ಅರ್ಧಾಂಶ 16-25 ವಯೋಗುಂಪಿನವರು

11:32 AM May 22, 2018 | udayavani editorial |

ಮುಂಬಯಿ : ಮುಂಬಯಿ ಮಹಾನಗರಿಯಲ್ಲಿ ವರ್ಷಂಪ್ರತಿ ನಾಪತ್ತೆಯಾಗುವ ಜನರಲ್ಲಿ ಅರ್ಧಾಂಶ ಮಂದಿ 16ರಿಂದ 25ರ ವಯೋಮಾನದವರಾಗಿರುತ್ತಾರೆ ಎಂದು ಮುಂಬಯಿ ಪೊಲೀಸರು ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದ್ದಾರೆ. 

Advertisement

ವರ್ಷಂಪ್ರತಿ ಮುಂಬಯಿ ಮಹಾನಗರಿಯಲ್ಲಿ ನಾಪತ್ತೆಯಾಗುತ್ತಿರುವ ಜನರ ಸಂಖ್ಯೆ ಏರುತ್ತಿದೆ; 2014, 2015 ಮತ್ತು  2016ರಲ್ಲಿ ಒಟ್ಟು 32,598 ಜನರು ಈ ಮಹಾನಗರಿಯಲ್ಲಿ ನಾಪತ್ತೆಯಾಗಿದ್ದಾರೆ; ಈ ಪೈಕಿ 27,565 ಮಂದಿಯನ್ನು ಅನಂತರದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಮುಂಬಯಿ ಕ್ರೈಮ್‌ ಬ್ರಾಂಚ್‌ ಸಹಾಯಕ ಪೊಲೀಸ್‌ ಕಮಿಷನರ್‌ ಭರತ್‌ ಗಾಯಕ್‌ವಾಡ್‌ ಅವರು ಆರ್‌ಟಿಐ ಕಾರ್ಯಕರ್ತ ಚೇತನ್‌ ಕೊಠಾರಿ ಅವರಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. 

2014ರಲ್ಲಿ 10,916, 2015ರಲ್ಲಿ 10,313 ಮತ್ತು 2016ರಲ್ಲಿ 11,369 ಮಂದಿ ನಾಪತ್ತೆಯಾಗಿರುವುದನ್ನು ಗಮನಿಸಿದರೆ ವರ್ಷಂಪ್ರತಿ ನಾಪತ್ತೆಯಾಗುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸ್ಪಷ್ಟವಿದೆ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next