ಮಂಡ್ಯ: ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಬೇಕು. ಸುಳ್ಳು ಮಾಹಿತಿ ನೀಡುತ್ತಿರುವ ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗ ಹಾಗೂ ಭೂ ಮಾಪ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ, ಹಳೇಬೂದನೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ತಾಲೂಕಿನ ಬೂದನೂರು ಗ್ರಾಪಂ ವ್ಯಾಪ್ತಿಯಲ್ಲಿ 170ಕ್ಕೂ ಹೆಚ್ಚು ನಿವೇಶನ ರಹಿತರಿಗೆ ಸರ್ಕಾರ ಭೂಮಿ ವಿತರಿಸಬೇಕೆಂದು ಆಗ್ರಹಿಸಿ 4 ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಆದರೂ ಜಿಲ್ಲಾಡಳಿತಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಭಾವಿಗಳ ಹಾಗೂಹಣದ ಆಮಿಷಕ್ಕೆ ಒಳಗಾಗಿ ನಿವೇಶನ ರಹಿತರಿಗೆವಂಚಿಸುವಕೆಲಸ ನಡೆದಿದೆ. ಇದಲ್ಲದೆ ಸ್ಥಳ ಪರಿಶೀಲನೆ ಬಂದಿದ್ದ ಎಸಿ ಹಾಗೂ ತಹಶೀಲ್ದಾರ್ ಅವರಿಗೆ ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗಹಾಗೂಭೂಮಾಪನಇಲಾಖೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂಮಿ ಪರಿಶೀಲನೆ ನಡೆಸಿಲ್ಲ: ಗ್ರಾಮದ ಸರ್ವೇ ನಂ 190/ಪಿ10ನ 6.20 ಎಕರೆ ಭೂಮಿಯೇ ಕಾಣುತ್ತಿಲ್ಲ ಎಂದು ಪೂರ್ವ ದಿಕ್ಕಿನಲ್ಲಿರುವ ಭೂಮಿಯ ಪರಿಶೀಲನೆ ನಡೆಸದೆ ಪಶ್ಚಿಮ ದಿಕ್ಕಿನಲ್ಲಿರುವ ಭೂಮಿಯನ್ನು ಎಸಿ, ತಹಶೀಲ್ದಾರ್ ಅವರಿಗೆ ತೋರಿಸಿ ವಂಚಿಸಲಾಗಿದೆ. ಬೂದನೂರು ಗ್ರಾಮದ ದಲಿತರ ಇನಾಮು, ಸರ್ಕಾರಿ ಶಾಲೆ ಹಾಗೂ ಸಾರ್ವಜನಿಕ ದಾರಿಗಳನ್ನು ಕಬಳಿಸಿರುವ ಭೂಗಳ್ಳರು ಬಡವರ ನಿವೇಶನ ಭೂಮಿಯನ್ನು ಕಬಳಿಸಲು ಸಂಚುರೂಪಿಸಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ಕೈ ಬಿಡುವುದಿಲ್ಲ: ತಾಲೂಕುಕಚೇರಿಯಲ್ಲಿ ಬೂದನೂರು ನಿವೇಶನರಹಿತರಿಗೆ ಭೂಮಿ ಮಂಜೂರು ಮಾಡುವ ಸಂಬಂಧದ ಕಡತಗಳನ್ನೇಅಧಿಕಾರಿಗಳು ಬಚ್ಚಿಟ್ಟು ಕಳೆದುಹೋಗಿದೆಎನ್ನುತ್ತಿದ್ದಾರೆ. ಕೂಡಲೇ ಇದರ ಬಗ್ಗೆ ತನಿಖೆ ನಡೆಸಿ, ಕಡತ ಪತ್ತೆ ಹಚ್ಚಿ ನಿವೇಶನ ಕಲ್ಪಿಸುವವರೆಗೂ ಪ್ರತಿಭಟನೆಕೈಬಿಡುವುದಿಲ್ಲ ಎಂದು ಎಚ್ಚರಿಸಿದರು. ಈಗಾಗಲೇಗುರುತಿಸಿರುವ ಸರ್ಕಾರಿ ಭೂಮಿಯನ್ನು 1-5 ಮಾಡಿರುವ ಪ್ರಕಾರ ಅಳತೆ ಮಾಡಿ ಹದ್ದುಬಸ್ತ್ ಗೊಳಿಸಿ ನಿವೇಶನ ರಹಿತರಿಗೆ ನೀಡಬೇಕು. ತಕ್ಷಣವೇ ಡೀಸಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಬೇಕು. ಬೂದನೂರು ಆಶ್ರಯ ನಿವೇಶನಕ್ಕೆ ಸಂಬಂಧಿಸಿದಂತೆ ಮಾಡಿರುವ ಆದೇಶ ಮತ್ತು ಆಗಿರುವ ಕ್ರಮದ ನಕಲು ಪ್ರತಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಕರುನಾಡು ಸೇವಕರು ಸಂಘಟನೆಯ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಬೂದನೂರು ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ, ವಕೀಲ ರಾಮಯ್ಯ,ಕಾರಸವಾಡಿ ಮಹದೇವು, ಲಕ್ಷ್ಮೀ, ಮಾದೇವಿ, ರೇವಮ್ಮ, ಪುಟ್ಟ ತಾಯಮ್ಮ, ಶೋಭಾ, ಸುಧಾ, ಕುಪ್ಪಯ್ಯ, ಮೋಹನ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಹಳೇಬೂದನೂರು ಗ್ರಾಮದ ನಿವೇಶನ ರಹಿತರಿಗೆ ನಿವೇಶನ ನೀಡುವ ಸಂಬಂಧ ಇದ್ದಕಡತಗಳು ಇಲ್ಲ ಎಂದು ಹೇಳುತ್ತಿದ್ದಾರೆ. ಪ್ರಭಾವಿಗಳ ಜೊತೆ ಸೇರಿಕೊಂಡು ಬಡವರ ನಿವೇಶನಕಬಳಿಸಲು ಮುಂದಾಗಿದ್ದಾರೆ. ಕೂಡಲೇ ಇದರ ಬಗ್ಗೆಕ್ರಮಕೈಗೊಳ್ಳಬೇಕು. ಇಲ್ಲಿಯವರೆಗೆಕ್ರಮಕೈಗೊಂಡಿರುವ ಬಗ್ಗೆ ತಿಳಿಸಬೇಕು.
– ಬಿ.ಕೆ.ಸತೀಶ, ಗ್ರಾಪಂ ಮಾಜಿ ಸದಸ್ಯ
ಸ್ವಂತ ಮನೆ ಹಕ್ಕಿಗಾಗಿ ಸಾಕಷ್ಟು ಬಾರಿ ಹೋರಾಟ ಮಾಡಿ, ಮನವಿಸಲ್ಲಿಸಿದರೂ ಸರ್ಕಾರ, ಜಿಲ್ಲಾಡಳಿತವಾಗಲೀಯಾವುದೇಕ್ರಮ ಕೈಗೊಂಡಿಲ್ಲ. ನಿವೇಶನ ರಹಿತರಿಗೆ ನಿವೇಶನ ನೀಡುವವರೆಗೂ ಹೋರಾಟ ಮುಂದುವರಿಯಲಿದೆ.
– ಎಂ.ಬಿ.ನಾಗಣ್ಣಗೌಡ, ಗೌರವಾಧ್ಯಕ್ಷರು, ಕರುನಾಡ ಸೇವಕರು ಸಂಘಟನೆ