Advertisement

ಹಲಸಂಗಿಯಲ್ಲಿ ನಾಡಹಬ್ಬ ಆಚರಿಸಲು ನಿರ್ಧಾರ

12:12 PM Jul 07, 2020 | Suhan S |

ವಿಜಯಪುರ: ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದ 2020-21ನೇ ಸಾಲಿನ ಕ್ರಿಯಾ ಯೋಜನೆ ರೂಪಿಸಬೇಕು. ಜಿಲ್ಲಾಡಳಿತದ ಸಹಯೋಗದಲ್ಲಿ ಹಲಸಂಗಿ ಗ್ರಾಮದಲ್ಲಿ ನಾಡಹಬ್ಬ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದಿಂದ ನಾಡಿನ ಶ್ರೇಷ್ಠ ಕವಿಗಳ ಕುರಿತು ಪ್ರಚಾರ ಮಾಡಲು ಹಾಗೂ ಸಾಹಿತ್ಯದ ಆಸಕ್ತಿಯನ್ನು ಜನರಲ್ಲಿ ಮೂಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ವ್ಯವಸ್ಥಿತ ಕ್ರಿಯಾ ಯೋಜನೆ ರೂಪಿಸುವಂತೆ ಅವರು ಸಂಬಂಧಿತ ಸದಸ್ಯ ಬಳಗಕ್ಕೆ ಸೂಚಿಸಿದರು. ಪ್ರತಿ ವರ್ಷ ಹಲಸಂಗಿ ಗೆಳೆಯರ ಬಳಗದಿಂದ ಮಧುರ ಚನ್ನರ ಹುಟ್ಟೂರು ಹಲಸಂಗಿ ಗ್ರಾಮದಲ್ಲಿ ಸಾಹಿತ್ಯ, ಸಂಗೀತ ಹಾಗೂ ಮಧುರ ಚನ್ನರ ವಿಚಾರಗಳನ್ನು ಇಂದಿನ ಪೀಳಿಗೆಗೆ ಮನವರಿಕೆ ಮಾಡಲು 10 ದಿನಗಳ ಕಾಲ ಜಿಲ್ಲಾಡಳಿತದ ಸಹಯೋಗದಲ್ಲಿ ನಾಡಹಬ್ಬ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ಡಾ| ಓಂಕಾರ ಕಾಕಡೆ, ಎಸ್‌.ಕೆ. ಕೊಪ್ಪಾ, ಎಂ.ಎಸ್‌. ಮಧಬಾವಿ, ಚೆನ್ನಪ್ಪ ಕಟ್ಟಿ, ಆರ್‌. ಸುನಂದಮ್ಮ, ಎ.ಎ.ಪಾರ್ಸಿ, ಡಿ.ಬಿ. ಭಜಂತ್ರಿ, ಆರ್‌.ಎನ್‌. ಸಿಂಪಿ, ಸೋಮಶೇಖರ ವಾಲಿ, ಜಗದೀಶ ಗಲಗಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next