Advertisement

ಕೈಗಾರಿಕೋದ್ಯಮಿಗಳ ಆತ್ಮಸ್ಥೈರ್ಯ ಕುಗ್ಗಿಸಲು ಬಿಡಲ್ಲ: ಹಾಲಪ್ಪ

04:04 PM Sep 08, 2022 | Team Udayavani |

ಸಾಗರ: ಸಣ್ಣ ಮತ್ತು ಅತಿಸಣ್ಣ ಕೈಗಾರಿಕೋದ್ಯಮಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಇಲಾಖೆಯ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಇಲ್ಲಿನ ನಗರಸಭೆ ಸಭಾಭವನದಲ್ಲಿ ಗುರುವಾರ ಮಂಗಳಬೀಸು ಮತ್ತು ರಾಮನಗರ ಕೈಗಾರಿಕಾ ವಸಾಹತು ಪ್ರದೇಶದ ಕೈಗಾರಿಕೋದ್ಯಮಿಗಳ ಅಹವಾಲು ಆಲಿಸಿ ಕೈಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಸೌಲಭ್ಯವನ್ನೇ ಕೊಡದೆ ಅವರಿಂದ ನಿವೇಶನ ಹಣ ಕಟ್ಟಿಸಿಕೊಂಡು ಸತಾಯಿಸುತ್ತಿರುವುದರ ವಿರುದ್ಧ ಸದನದಲ್ಲಿ ಸರ್ಕಾರದ ಗಮನ ಸೆಳೆದು, ಕ್ರಮಕ್ಕೆ ಒತ್ತಾಯಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಪ್ರದೇಶದಲ್ಲಿ ನಮ್ಮೂರಿನ ಸಣ್ಣ ಉದ್ಯಮಿಗಳು ಬದುಕು ಕಟ್ಟಿಕೊಳ್ಳಲು ನಿವೇಶನ ಖರೀದಿಸಿ ಉದ್ದಿಮೆ ಪ್ರಾರಂಭ ಮಾಡಲು ಮುಂದಾಗಿದ್ದಾರೆ. ಮಂಗಳಬೀಸು ಪ್ರದೇಶದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ನಗರಸಭೆ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಆದರೆ ರಾಮನಗರ ಪ್ರದೇಶದಲ್ಲಿ ಯಾವುದೇ ಸೌಲಭ್ಯವನ್ನು ನಿವೇಶನ ಪಡೆದವರಿಗೆ ಕೊಡದೆ ಇರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು.

ಕಳೆದ ಎರಡು ವರ್ಷದಿಂದ ರಾಮನಗರದಲ್ಲಿ ಕೈಗಾರಿಕೆ ಪ್ರಾರಂಭಿಸಲು ನಿವೇಶನ ಖರೀದಿ ಮಾಡಿದವರಿಗೆ ಸೌಲಭ್ಯ ಕೊಡದೆ ನಿರಾಶರನ್ನಾಗಿ ಮಾಡಲಾಗುತ್ತಿದೆ. ಒಬ್ಬರ ಹೆಸರಿಗೆ ಮಂಜೂರಾದ ನಿವೇಶನವನ್ನು ಹಣ ಕಟ್ಟಿಲ್ಲ ಎಂದು ಮತ್ತೊಬ್ಬರಿಗೆ ಮಂಜೂರು ಮಾಡಲಾಗಿದೆ. ಸೌಲಭ್ಯವೇ ಕೊಡದೆ ಹಣ ಕಟ್ಟಿ ಎಂದು ಹೇಳುತ್ತಿರುವ ಅಧಿಕಾರಿಗಳ ವರ್ತನೆಯೇ ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಲಾಯರ್ ನೋಟಿಸ್ ಕೊಡಲು ಫಲಾನುಭವಿಗಳಿಗೆ ಹೇಳಿದ್ದೇನೆ. ನಮ್ಮೂರಿನ ಕೈಗಾರಿಕೋದ್ಯಮಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲೆನಾಡು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ರಜನಿಕಾಂತ್, ಕಾರ್ಯದರ್ಶಿ ರವಿ, ಗೌರವಾಧ್ಯಕ್ಷ ಶಿವಾನಂದ್, ಕಾರ್ತಿಕ್, ರಾಘವೇಂದ್ರ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯ ಗಣೇಶಪ್ರಸಾದ್, ಕೈಗಾರಿಕಾ ಇಲಾಖೆಯ ರವಿಕುಮಾರ್, ಪೌರಾಯುಕ್ತ ರಾಜು ಡಿ. ಬಣಕಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ, ನಗರ ಠಾಣೆ ವೃತ್ತ ನಿರೀಕ್ಷಕ ಸೀತಾರಾಮ್ ಇನ್ನಿತರರು ಹಾಜರಿದ್ದರು.

Advertisement

ಇದನ್ನೂ ಓದಿ : ಎನ್ ಐಎ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ : ರಿಯಾಝ್ ಫರಂಗಿಪೇಟೆ

Advertisement

Udayavani is now on Telegram. Click here to join our channel and stay updated with the latest news.

Next