Advertisement
ಕಳೆದ ಒಂದು ವರ್ಷದಿಂದ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ಸುದ್ದಿಯಿದ್ದು, ಅದಕ್ಕೀಗ ಈ ರಾಜೀನಾಮೆ ಮತ್ತಷ್ಟು ಪುಷ್ಟಿ ನೀಡಿದೆ. ಫೆ. 2ರಿಂದ ಫೆ. 4ರೊಳಗೆ ಹಾಲಾಡಿಯವರು ಬಿಜೆಪಿ ಸೇರ್ಪಡೆ ಯಾಗಲಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಫೆ. 4ರಂದು ಬೆಂಗಳೂರಿಗೆ ಬರುವ ಸಾಧ್ಯತೆಗಳಿದ್ದು, ಅಂದೇ ಅಲ್ಲಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರುವ ಸಂಭವ ಕೂಡ ಇದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿ ಯೂರಪ್ಪ ನೇತೃತ್ವದಲ್ಲಿ ನ. 13ರಂದು ಕುಂದಾ ಪುರದಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಹಾಲಾಡಿ ಬೆಂಬಲಿಗರು ಬೃಹತ್ ಸಂಖ್ಯೆಯಲ್ಲಿ ಸೇರುವ ಮೂಲಕ ಕೇಂದ್ರ ಸಚಿವರು, ರಾಜ್ಯ ನಾಯಕರ ಮುಂದೆ ಶಕ್ತಿ ಪ್ರದರ್ಶಿಸಿದ್ದರು. ಈ ರ್ಯಾಲಿಯಲ್ಲಿ ಮೂಲ ಬಿಜೆಪಿಗರು ಹಾಗೂ ಹಾಲಾಡಿ ಬೆಂಬಲಿಗರ ಮಧ್ಯೆ ಗದ್ದಲ ಏರ್ಪಟ್ಟಿದ್ದು, ಬಳಿಕ ಬಿಎಸ್‌ವೈ ಅವರೇ ಸಭೆಯಲ್ಲಿ ಬಹಿರಂಗವಾಗಿ ಶ್ರೀನಿವಾಸ ಶೆಟ್ಟಿಯವರೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ್ದರು.
Related Articles
Advertisement
ಸ್ವಇಚ್ಛೆಯಿಂದ ಬಿಜೆಪಿ ಸೇರ್ಪಡೆಪ್ರಧಾನಿ ಮೋದಿ ಹಾಗೂ ಬಿಜೆಪಿ ಸಿದ್ಧಾಂತದ ಮೇಲಿನ ಅಭಿಮಾನ ಮತ್ತೆ ಬಿಜೆಪಿಯತ್ತ ಬರು ವಂತೆ ಮಾಡಿದೆ. ಬೆಂಬಲಿಗರು, ಹಿತೈಷಿಗಳು, ಕಾರ್ಯ ಕರ್ತರ ಸಲಹೆಯೊಂದಿಗೆ, ಬಿಜೆಪಿ ಮುಖಂಡರ ಮನವಿ ಮೇರೆಗೆ ಮೊದಲಿದ್ದ ಬಿಜೆಪಿ ಪಕ್ಷಕ್ಕೆ ಸ್ವಇಚ್ಛೆ ಯಿಂದ ಸೇರ್ಪಡೆಗೊಳ್ಳುತ್ತಿದ್ದೇನೆ. ಫೆ. 4ಕ್ಕಿಂತ ಮೊದಲೇ ಸೇರಲಿದ್ದೇನೆ. ಯಾವುದೇ ದೊಡ್ಡ ಮಟ್ಟದ ಕಾರ್ಯ ಕ್ರಮವಿಲ್ಲದೆ, ಬೆಂಗಳೂರಿನ ಪಕ್ಷದ ಕಚೇರಿಯಲ್ಲಿಯೇ ಸೇರ್ಪಡೆಗೊಳ್ಳುತ್ತಿದ್ದೇನೆ. ಯಾವುದೇ ನಿರೀಕ್ಷೆ, ಫಲಾಪೇಕ್ಷೆ ಬಯಸದೆ ಸಾಮಾನ್ಯ ಕಾರ್ಯ ಕರ್ತ ನಾಗಿ ಪಕ್ಷದಲ್ಲಿ ದುಡಿಯುತ್ತೇನೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ ಅಂಗೀಕಾರ
ಶ್ರೀನಿವಾಸ ಶೆಟ್ಟಿ ಅವರು ನನ್ನ ಎದುರೇ ಸಹಿ ಹಾಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿರುವುದರಿಂದ ಹಾಗೂ ರಾಜೀನಾಮೆ ಕೊಡುವುದರ ಹಿಂದೆ ಯಾವುದೇ ಆಸೆ, ಆಮಿಷ, ಒತ್ತಡಕ್ಕೆ ಒಳಗಾಗದೇ ಇರುವು ದನ್ನು ವಿಚಾರಿಸಿ ಮನವರಿಕೆ ಮಾಡಿಕೊಂಡು ರಾಜೀನಾಮೆ ಪತ್ರ ಅಂಗೀಕರಿಸಿದ್ದೇನೆ.
– ಸ್ಪೀಕರ್ ಕೆ.ಬಿ. ಕೋಳಿವಾಡ 4 ಬಾರಿ ಶಾಸಕರಾಗಿ ಆಯ್ಕೆ
ಹಾಲಾಡಿ ಶ್ರೀನಿವಾಸ ಶೆಟ್ಟಿ ಮೂರು ಬಾರಿ ಬಿಜೆಪಿಯಿಂದ ಗೆದ್ದು, ಒಂದು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನ ಕೆ. ಪ್ರತಾಪ್‌ಚಂದ್ರ ಶೆಟ್ಟಿ ವಿರುದ್ಧ, 2004ರಲ್ಲಿ ಕಾಂಗ್ರೆಸ್‌ನ ಅಶೋಕ ಕುಮಾರ ಹೆಗ್ಡೆ ವಿರುದ್ಧ, 2008ರಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾಗಿ ಜಯಗಳಿಸಿದ್ದರು. 2013ರಲ್ಲಿ ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಮಲ್ಯಾಡಿ ಶಿವರಾಮ ಶೆಟ್ಟಿ ವಿರುದ್ಧ ಭರ್ಜರಿಯಾಗಿ ಜಯ ಗಳಿಸಿದ್ದರು.