Advertisement

ಬಿಜೆಪಿ ಸೇರ್ಪಡೆಯಾಗಲು ಶಾಸಕ ಸ್ಥಾನಕ್ಕೆ ಹಾಲಾಡಿ ರಾಜೀನಾಮೆ

01:57 PM Jan 30, 2018 | |

ಕುಂದಾಪುರ : ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿ ಸೇರ್ಪಡೆಯಾಗಲು ಇದ್ದ ಪಕ್ಷಾಂತರ ಕಾಯಿದೆ ತೊಡಕನ್ನು ನಿವಾರಿಸಲು ಶಾಸಕ ಸ್ಥಾನಕ್ಕೆ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ಸಲ್ಲಿಸುತ್ತಿದ್ದಾರೆ. 

Advertisement

ಶ್ರೀನಿವಾಸ್‌ ಶೆಟ್ಟಿ ಅವರು ಮಂಗಳವಾರ ಸ್ಪೀಕರ್‌ ಕೋಳಿವಾಡ ಅವರ ಭೇಟಿಗಾಗಿ  ರಾಣೆಬೆನ್ನೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. 

ಶ್ರೀನಿವಾಸ್‌ ಶೆಟ್ಟಿ ಅವರು ಫೆಬ್ರವರಿ 4 ರಂದು ಪ್ರಧಾನಿ  ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.

ಸಜ್ಜನ ರಾಜಕಾರಣಿ,ಪ್ರಭಾವಿ ಸಮುದಾಯದ ನಿಷ್ಕಳಂಕ ಮುಖಂಡರೆನಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿರುವ ಹಾಲಾಡಿ ಅವರನ್ನು ಬಿಜೆಪಿ ಕರಾವಳಿ ಭಾಗದಲ್ಲಿ  ಭರ್ಜರಿ ಪ್ರಚಾರದಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳಿವೆ. 

ಈಗಾಗಲೇ ಅವರು ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next