Advertisement
ಮೇ 16ರ ಮಳೆಗೆ ಹಾಲಾಡಿ ಮೆಸ್ಕಾಂ ವ್ಯಾಪ್ತಿಯಲ್ಲಿ ಸಮಾರು 200 ವಿದ್ಯುತ್ ಕಂಬಗಳು ಉರುಳಿ ಬಿದ್ದರೆ, 5 ಟ್ರಾನ್ಸ್‌ಫರ್ ಕಂಬಗಳಿಗೆ ಹಾನಿಯಾದ್ದು, ಕಳೆದ 20 ದಿನಗಳಿಂದ ಇದನ್ನು ಸರಿಪಡಿಸಲು ಮೆಸ್ಕಾಂ ಹರಸಾಹಸ ಪಡುತ್ತಿದ್ದು, ಸಿಬಂದಿ ಕೊರತೆ, ರಾತ್ರಿ ಪಾಳಿಯ ನೌಕಕರರಿಲ್ಲದ ಕಾರಣ ತ್ವರಿತವಾಗಿ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಇದರಿಂದ ಕೊಂಜಾಡಿ ಭಾಗದಲ್ಲಿ ಸರಿಯಾಗಿ ಕರೆಂಟಿಲ್ಲ.
ಸಿಬಂದಿ ಕೊರತೆಯ ನಡುವೆಯೂ ಹೆಚ್ಚಿನ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ಆದರೆ ಕೊಂಜಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಮಾತ್ರ ಇನ್ನೂ ಕೂಡ ರಸ್ತೆ ಬದಿ ಬಿದ್ದ ವಿದ್ಯುತ್ ಕಂಬಗಳು ಹಾಗೆಯೇ ಇದೆ. ಅದರ ತೆರವು ಅಥವಾ ಸರಿಪಡಿಸುವ ಕೆಲಸ ಇನ್ನೂ ಆಗಿಲ್ಲ. ಅದಲ್ಲದೆ ಕಂಬಗಳು ಬಿದ್ದಿದ್ದರಿಂದ ರಸ್ತೆ ಪಕ್ಕದಲ್ಲೇ ವಿದ್ಯುತ್ ವಯರ್‌ಗಳು ಕೆಳಮಟ್ಟದಲ್ಲಿ ನೇತಾಡುತ್ತಿರುವುದು, ಅನಾಹುತವನ್ನು ಆಹ್ವಾನಿಸುವಂತಿದೆ. ಕೊಟ್ಟರೂ, ಸರಿಯಾಗಿಲ್ಲ
ಈಗ ಬದಲಿಯಾಗಿ ಬೇರೆಯೊಂದು ಕಡೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ, ತಾತ್ಕಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಈಗ ಹಗಲು ಹೊತ್ತು 2 ರಿಂದ 3 ಗಂಟೆ ಕೊಟ್ಟರೆ, ರಾತ್ರಿ 2 ಗಂಟೆಯಷ್ಟೇ ಕರೆಂಟು ಇರುತ್ತದೆ. ಹಗಲು ಹೊತ್ತು ಕೊಡದಿದ್ದರೂ, ಕನಿಷ್ಠ ರಾತ್ರಿ ವೇಳೆಯಾದರೂ ಕರೆಂಟು ಕೊಡಲಿ. ಇಷ್ಟು ದಿನವಾದರೂ, ಇನ್ನೂ ವ್ಯವಸ್ಥೆ ಸರಿಪಡಿಸಿಲ್ಲ ಎಂದರೆ ಏನರ್ಥ ಎಂದು ಸ್ಥಳೀಯರಾದ ಶಿವ ಕೊಂಜಾಡಿ ಅವರು ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
Related Articles
200ಕ್ಕೂ ಹೆಚ್ಚು ಕಂಬಗಳು ಉರುಳಿ ಬಿದ್ದಿದ್ದರಿಂದ ಒಂದೇ ಸಮಯದಲ್ಲಿ ಎಲ್ಲವೂ ಸರಿಪಡಿಸುವುದು ಅಸಾಧ್ಯ. ಸಮರೋಪಾದಿಯಲ್ಲಿ ವಿದ್ಯುತ್ ಕಂಬ ಅಳವಡಿಕೆ ಕಾರ್ಯವನ್ನು ಮಾಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಎಲ್ಲ ಕಡೆಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಪ್ರಯತ್ನಿಸುತ್ತೇವೆ.
– ಮಂಜುನಾಥ ಶಾನುಭಾಗ್, ಹಾಲಾಡಿ ಜೆಇಇ
Advertisement