Advertisement

ಎಚ್‌ಎಎಲ್‌- ರೋಲ್ಸ್‌ ರಾಯ್ಸ ಒಡಂಬಡಿಕೆ

02:25 PM May 05, 2021 | Team Udayavani |

ಬೆಂಗಳೂರು: ಯುದ್ಧ ಹಡಗುಗಳಲ್ಲಿ ಬಳಕೆಯಾಗುವ ಎಂಟಿ30 ಎಂಜಿನ್‌ಗಳ ಅಳವಡಿಕೆ, ಮಾರುಕಟ್ಟೆ, ಸೇವೆಗಳಿಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ.,(ಎಚ್‌ಎಎಲ್‌) ಮತ್ತು ರೋಲ್ಸ್‌ ರಾಯ್ಸ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

Advertisement

ಎಚ್‌ಎಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ಹಾಗೂ ರೋಲ್ಸ್‌-ರಾಯ್ಸ ಇಂಡಿಯಾ ಮತ್ತು ದಕ್ಷಿಣ ಏಷಿಯಾ ಅಧ್ಯಕ್ಷ ಕಿಶೋರ್‌ ಜಯರಾಮನ್‌ ಒಪ್ಪಂದಕ್ಕೆಪರಸ್ಪರ ಸಹಿ ಹಾಕಿದರು.

ನಂತರ ಮಾತನಾಡಿದ ಆರ್‌.ಮಾಧವನ್‌, ದಶಕಗಳಿಂದ ರೋಲ್ಸ್‌-ರಾಯ್ಸ ನೌಕಾ ಕ್ಷೇತ್ರದಲ್ಲಿನಮ್ಮ ಮೌಲ್ಯಯುತ ಪಾಲುದಾರ ಕಂಪೆನಿ ಆಗಿದೆ. ಈಒಪ್ಪಂದದ ಮೂಲಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.ವ್ಯಾಪಾರ ವೃದ್ಧಿಗೆ ಸಹಕಾರಿಯೂ ಆಗಿದೆ ಎಂದರು.

ಜಯರಾಮನ್‌ ಮಾತನಾಡಿ, ಮುಂದಿನ ದಿನಗಳಲ್ಲಿ ನೌಕಾಕ್ಷೇತ್ರದ ರಕ್ಷಣಾ ವಿಭಾಗದ ಸಾಮರ್ಥ್ಯ ವೃದ್ಧಿ ಹಾಗೂ ಹಲವುಪರಿಹಾರಗಳನ್ನು ಕಂಡುಕೊಳ್ಳಲು ಈ ಸಹಭಾಗಿತ್ವವು ವೇದಿಕೆಆಗಲಿದೆ ಎಂದು ವಿಶ್ಲೇಷಿಸಿದರು. ಎಂಟಿ 30 ವಿಶ್ವದ ಅತ್ಯಂತಶಕ್ತಿಯುತ ಎಂಜಿನ್‌ ಆಗಿದೆ. ನೌಕಾ ಅನಿಲ ಟರ್ಬೈನ್‌ನಲ್ಲಿಉತ್ಕೃಷ್ಠ ದರ್ಜೆಯ ಈ ಎಂಜಿನ್‌ ಹತ್ತಾರು ಅತ್ಯಾಧುನಿಕಅಪ್ಲಿಕೇಷನ್‌ಗಳನ್ನು ಇದು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next