Advertisement

ಎಚ್‌ಎಎಲ್‌ಗೆ ಪಿಎಸ್‌ಎಲ್‌ವಿ 5 ರಾಕೆಟ್‌ ನಿರ್ಮಾಣದ ಹೊಣೆ

12:43 AM Sep 05, 2022 | Team Udayavani |

ಹೊಸದಿಲ್ಲಿ: ಹಿಂದುಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌-ಎಲ್‌+ಕ್ಯಾರ್‌(38)+ಟಿ ಒಕ್ಕೂಟಕ್ಕೆ 5 ರಾಕೆಟ್‌ ಅಭಿವೃದ್ಧಿ­ಪಡಿಸುವ ಅವಕಾಶ ಲಭ್ಯವಾಗಿದೆ. ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌(ಎನ್‌ಎಸ್‌ಐಎಲ್‌)
ನೊಂದಿಗೆ 860 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

Advertisement

ಈ ಮೂಲಕ ಎಚ್‌ಎಎಲ್‌ ಕಂಪೆನಿಯು ಪೂರ್ಣ ಪ್ರಮಾಣದಲ್ಲಿ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್ಸ್‌ (ಪಿಎಸ್‌ಎಲ್‌ವಿ) ಉತ್ಪಾದನ ರಂಗಕ್ಕೆ ಪ್ರವೇಶಿಸಿದಂತಾಗಿದೆ.

ಒಪ್ಪಂದದ ಪ್ರಕಾರ, ಎಚ್‌ಎಎಲ್‌ 5 ಪಿಎಸ್‌ಎಲ್‌ವಿ ರಾಕೆಟ್‌ ನಿರ್ಮಿಸ­ಲಿದೆ. 2 ವರ್ಷಗಳೊಳಗಾಗಿ ಮೊದಲ ಬಾಹ್ಯಾಕಾಶ ನೌಕೆ­ಯನ್ನು ಅಭಿವೃದ್ಧಿಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಪಾಲುದಾರರೊಂದಿಗೆ ಸೇರಿ ಸಂಪೂರ್ಣ­ವಾಗಿ ಜಿಎಸ್‌ಎಲ್‌ವಿ-ಎಂಕೆ 3 ರಾಕೆಟ್‌ ಅನ್ನು ಅಭಿವೃದ್ಧಿಪಡಿಸುವ ಯೋಜ­ನೆಯನ್ನೂ ಎನ್‌ಎಸ್‌ಐಎಲ್‌ ಹಾಕಿಕೊಂಡಿದೆ.

ಶೇ.8ರ ಪಾಲು ಹೊಂದುವ ಗುರಿ: ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಪ್ರಸ್ತುತ ಭಾರತದ ಬಾಹ್ಯಾಕಾಶ ವಲಯದ ಪಾಲು ಶೇ.2ರಷ್ಟಿದೆ. ಇಸ್ರೋ ಜತೆ ಖಾಸಗಿ ವಲಯವೂ ಕೈಜೋಡಿಸಿ ಶ್ರಮ­ಪಟ್ಟರೆ ಇದನ್ನು ಶೇ.8ಕ್ಕೇರಿಸಬಹುದಾಗಿದೆ ಎಂದು ಇಂಡಿಯನ್‌ ನ್ಯಾಶನಲ್‌ ಸ್ಪೇಸ್‌ ಪ್ರೊಮೋಶನ್‌ ಆ್ಯಂಡ್‌ ಆಥರೈಸೇಶನ್‌ ಸೆಂಟರ್‌ ಮುಖ್ಯಸ್ಥ ಪವನ್‌ ಕುಮಾರ್‌ ಗೋಯೆಂಕಾ ಅಭಿಪ್ರಾಯ­ಪಟ್ಟಿದ್ದಾರೆ. ಸದ್ಯ ದಲ್ಲೇ ಹೊಸ ಬಾಹ್ಯಾಕಾಶ ನೀತಿ ಅನಾವರಣ ಗೊಳ್ಳಲಿದ್ದು, ಖಾಸಗಿ ಸಂಸ್ಥೆಗಳು ಎದುರಿಸು ತ್ತಿರುವ ಅಡ್ಡಿ ಹಾಗೂ ಸಮಸ್ಯೆಗಳಿಗೆ ಅದರಲ್ಲಿ ಪರಿಹಾರ ಒದಗಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next