Advertisement
50ರ ದಶಕದಲ್ಲಿ ಫುಟ್ಬಾಲ್ ತಂಡದ ಖ್ಯಾತ ತರಬೇತುದಾರಾಗಿದ್ದ ಸೈಯದ್ ಅಬ್ದುಲ್ ರಹೀಮ್ ಅವರ ಪುತ್ರ ಸಾಹೀದ್ ಹಕೀಮ್. 1960ರ ರೋಮ್ ಒಲಿಂಪಿಕ್ಸ್ ನಲ್ಲಿ ಭಾರತದ ಕೋಚ್ ತಂದೆ ಸೈಯದ್ ಅಬ್ದುಲ್ ರಹೀಮ್ ಅವರು ಆಗಿದ್ದರೆ, ಸಾಹೀದ್ ಹಕೀಮ್ ತಂಡದ ಸದಸ್ಯರಾಗಿದ್ದರು. ಸಾಹೀದ್ ಹಕೀಮ್ ಅವರು “ಹಕೀಮ್ ಸಾಬ್” ಎಂದೇ ಹೆಸರುವಾಸಿಯಾಗಿದ್ದಾರೆ.
Related Articles
Advertisement
ತಂದೆ-ತಾಯಿ ಸಮಾಧಿಗಳು ಹೈದರಾಬಾದ್‍ನಲ್ಲಿ ಇರುವುದರಿಂದ ಇವರ ಅಂತ್ಯಸಂಸ್ಕಾರವೂ ಅಲ್ಲಿಯೇ ನಡೆಯಲಿದೆ. ಈಗಾಗಲೇ ಇವರ ಪಾರ್ಥಿವ ಶರೀರವನ್ನು ಹೈದರಾಬಾದ್‍ಗೆ ಸ್ಥಳಾಂತರಿಸಲಾಗಿದೆ ಎಂದು ಅವರು ‘ಉದಯವಾಣಿ’ಗೆ ಮಾಹಿತಿ ನೀಡಿದರು.
80ರ ಇಳಿಯಸ್ಸಿನಲ್ಲೂ ಅವರಿಗೂ ಫುಟ್ಬಾಲ್ ಬಗ್ಗೆ ಅತೀಯ ಆಸಕ್ತಿ ಇತ್ತು. ಇಲ್ಲಿನ ಆಟಗಾರರಿಗೆ ಅವರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಸಿಎಎ ವಿರೋಧಿ ಮತ್ತು ರೈತರ ಪರ ಹೋರಾಟದಲ್ಲೂ ಅವರು ಭಾಗಿಯಾಗಿದ್ದರು. ಕಳೆದ ವರ್ಷ ಕೋವಿಡ್ ನಿಂದ ಅವರು ಕೊರೊನಾದಿಂದ ಗುಣಮುಖರಾಗಿದ್ದರು.
ಹಕೀಮ್ ಅವರು ಐದು ದಶಕಗಳ ಕಾಲ ಭಾರತೀಯ ಫುಟ್ಬಾಲ್‍ನ ಭಾಗವಾಗಿದ್ದರು. ಭಾರತೀಯ ಫುಟ್ಬಾಲ್ ತಂಡದ ಅಭಿವೃದ್ಧಿಗೆ ಆಟಗಾರರರಾಗಿ, ತರಬೇತುದಾರರಾಗಿ ಅವರು ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಇವರ ಜೀವಮಾನದ ಸಾಧನೆಗೆ 2017ರಲ್ಲಿ ಧ್ಯಾನಚಂದ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಧ್ಯಾನಚಂದ್ ಪ್ರಶಸ್ತಿಗೆ ಭಾಜನರಾದ ಎರಡನೇ ಫುಟ್ಬಾಲ್ ಆಟಗಾರರ ಎಂಬ ಕೀರ್ತಿ ಇವರಾಗಿತ್ತು.
ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿಯೂ ಇವರು ಸೇವೆ ಸಲ್ಲಿಸಿದ್ದರು. ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರು ಹಾಗೂ 2017ರ 17 ವಯೋಮಿತಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಾಜೆಕ್ಟ್ ವ್ಯವಾಸ್ಥಾಪಕರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು.