Advertisement

ಹಜ್‌ ಕೋಟಾ 30 ಸಾವಿರ ಏರಿಕೆ

02:11 AM Jun 29, 2019 | Team Udayavani |

ಒಸಾಕ: ಇನ್ನು ಮುಂದೆ ಭಾರತದಿಂದ ಪ್ರತಿ ವರ್ಷ 2 ಲಕ್ಷ ಮಂದಿ ಮುಸ್ಲಿಮರು ಹಜ್‌ ಯಾತ್ರೆ ಕೈಗೊಳ್ಳಲು ಅವಕಾಶವಿದೆ. ಇದುವರೆಗೆ ಭಾರತದಿಂದ 1,70,000 ಮಂದಿಗೆ ಮಾತ್ರ ತೆರಳಲು ಅವಕಾಶವಿತ್ತು. ಅದನ್ನು ಈಗ 30 ಸಾವಿರದಷ್ಟು ಪರಿಷ್ಕರಿಸಲು ಸೌದಿ ಅರೇಬಿಯಾ ಒಪ್ಪಿಕೊಂಡಿದೆ.

Advertisement

ಜಪಾನ್‌ನ ಒಸಾಕದಲ್ಲಿ ನಡೆಯುತ್ತಿರುವ ಜಿ20 ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನಡುವೆ ಶುಕ್ರವಾರ ನಡೆದ ಮಾತುಕತೆ ವೇಳೆ ಹಜ್‌ ಕೋಟಾ ಏರಿಕೆಗೆ ಸಮ್ಮತಿ ಸೂಚಿಸಲಾಗಿದೆ. ಈ ಬಗೆಗಿನ ವಿವರವನ್ನು ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ನೀಡಿದ್ದಾರೆ.

ಬಂಡವಾಳ ಹೂಡಿಕೆ, ವ್ಯಾಪಾರ, ಇಂಧನ ಸುರಕ್ಷತೆ, ಉಗ್ರ ನಿಗ್ರಹ ವಿಚಾರಗಳ ಬಗ್ಗೆ ಕೂಡ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಗೋಖಲೆ ತಿಳಿಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ, ಸಹಕಾರ ನೀಡುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳ ನಡುವೆ ವಿಮಾನ ಯಾನ ಹೆಚ್ಚಿಸುವ ಬಗ್ಗೆಯೂ ಮಾತುಕತೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next