Advertisement

ವಿಐಪಿ ಹಜ್‌ ಕೋಟಾ ರದ್ದು: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

09:51 PM Jan 11, 2023 | Team Udayavani |

ನವದೆಹಲಿ: ವಿಐಪಿ ಹಜ್‌ ಕೋಟಾಗೆ ಅಂತ್ಯಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿಂದೆ ವಿಶೇಷ ಕೋಟಾದಡಿ ಹಜ್‌ ಯಾತ್ರೆಗೆ ತೆರಳಲು ವಿಐಪಿಗಳಿಗೆ ಸೀಟು ಮೀಸಲಿಡಲಾಗುತಿತ್ತು.

Advertisement

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವೆ ಸ್ಮತಿ ಇರಾನಿ, “ವಿಐಪಿ ಸಂಸ್ಕೃತಿಗೆ ಅಂತ್ಯಹಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮದ ಭಾಗವಾಗಿ ಹಜ್‌ ಯಾತ್ರೆಗೆ ಇದ್ದ ವಿಐಪಿ ವಿಶೇಷ ಕೋಟಾ ರದ್ದುಪಡಿಸಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಈ ಕ್ರಮ ಜಾರಿಗೊಳಿಲಾಗಿತ್ತು,’ ಎಂದು ಹೇಳಿದರು.

“2012ರಲ್ಲಿ ಆರಂಭವಾದ ವಿಐಪಿ ಹಜ್‌ ಕೋಟಾ ಅಡಿ ಸುಮಾರು 5,000 ಸೀಟುಗಳನ್ನು ಮೀಸಲಿಡಲಾಗಿತ್ತು.

ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯ, ಹಜ್‌ ಸಮಿತಿ ಮತ್ತು ಉನ್ನತ ಸಂವಿಧಾನ ಹುದ್ದೆಗಳಿಗೆ ಈ ವಿಶೇಷ ಮೀಸಲು ಕೋಟಾ ನಿಗದಿಪಡಿಸಲಾಗಿತ್ತು. ಸರ್ಕಾರದಲ್ಲಿ ಪರಿಚಯ ಇದ್ದರೆ, ಶಿಫಾರಸು ಮೂಲಕ ಅಂತಹವರಿಗೆ ಸೀಟು ನೀಡಲಾಗುತಿತ್ತು. ಇದೀಗ ಈ ಪದ್ಧತಿಗೆ ಅಂತ್ಯಹಾಡಿದ್ದೇವೆ,’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next