ನವದೆಹಲಿ: ಪ್ರಸಕ್ತ ವರ್ಷದಿಂದ ದೇಶದಿಂದ ಹಜ್ ಯಾತ್ರೆ ತೆರಳುವವರಿಗೆ ಖರ್ಚು ಕಡಿಮೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷದ ವರೆಗೆ ಯಾತ್ರೆಗಾಗಿ ಅರ್ಜಿ ಸಲ್ಲಿಸುವವರು 400 ರೂ. ಶುಲ್ಕ ಪಾವತಿ ಮಾಡಬೇಕಾಗಿತ್ತು. ಹಾಲಿ ವರ್ಷದಿಂದ ಅರ್ಜಿ ಶುಲ್ಕವನ್ನು ಅದನ್ನು ಪಾವತಿ ಮಾಡಬೇಕಾಗಿಲ್ಲ. ಇದರ ಜತೆಗೆ ಪ್ರತಿ ಒಬ್ಬರಿಗೆ ಒಟ್ಟು ವೆಚ್ಚದ ಪೈಕಿ 50 ಸಾವಿರ ರೂ. ಕಡಿಮೆಯಾಗಲಿದೆ ಎಂದು ಕೇಂದ್ರದ ಹಿರಿಯ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.
ಸೂಟ್‌ಕೇಸ್ ಇತರ ವಸ್ತುಗಳಿಗೆ ಪ್ರತ್ಯೇಕವಾಗಿ ಹೆಚ್ಚುವರಿ ಶುಲ್ಕವನ್ನೂ ವಿಧಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಮಂಗಳೂರು, ಬೆಂಗಳೂರು ಸೇರಿದಂತೆ ದೇಶದ 25 ಆಯ್ಕೆ ಮಾಡಿದ ಸ್ಥಳಗಳಿಂದ ಸುಲಭವಾಗಿ ಯಾತ್ರೆ ಕೈಗೊಳ್ಳಲೂ ಅವಕಾಶ ಕಲ್ಪಿಸಲಾಗಿದೆ.
ಪ್ರಸಕ್ತ ವರ್ಷ ದೇಶದಿಂದ ಹಜ್ ಯಾತ್ರೆಗಾಗಿ 1.75 ಲಕ್ಷ ಮಂದಿಗೆ ಅವಕಾಶ ಲಭ್ಯವಾಗಿದೆ. ಈ ಪೈಕಿ ಉತ್ತರ ಪ್ರದೇಶದಿಂದಲೇ 30 ಸಾವಿರ ಮಂದಿ ಇದ್ದಾರೆ.