Advertisement
ತಾವೇ ಅತೀ ದೊಡ್ಡ ದೇವರೆಂಬಂತೆ ವರ್ತಿಸುತ್ತಿದ್ದ ತಮ್ಮ ತಮ್ಮ ಕಾಲದ ಧರ್ಮಗುರುಗಳು ಮತ್ತು ಸರ್ವಾ ಧಿಕಾರಿಗಳ ಶೋಷಣೆಯ ಮುಷ್ಠಿಗಳಿಂದ ಮರ್ದಿತ ಜನಸಾಮಾನ್ಯರನ್ನು ವಿಮೋಚಿಸಿ ನೈಜ ಸೃಷ್ಟಿಕರ್ತ ನೀಡಿರುವ ಜೀವನಕ್ರಮದ ಅಧೀನಕ್ಕೆ ತರುವುದು ಸಾಮಾನ್ಯವಾಗಿ ಪ್ರವಾದಿಗಳ ದೌತ್ಯವಾಗಿತ್ತು.
Related Articles
Advertisement
ಹಜ್: ಹಜ್‌ನ ಸಕಲ ವಿಧಿಗಳು ಇಬ್ರಾಹೀಮರ ಈ ಚರಿತ್ರೆಯನ್ನು ನೆನಪಿಸುವವುಗಳೇ ಆಗಿವೆ. ಸಂಪತ್ತು, ಆರೋಗ್ಯ ಮತ್ತು ಎಲ್ಲದರಲ್ಲೂ ಅರ್ಹನಾಗಿರುವ ವಯಸ್ಕ ಮುಸಲ್ಮಾನ ಜೀವನದಲ್ಲೊಮ್ಮೆ ಹಜ್ ಯಾತ್ರೆ ಕೈಗೊಳ್ಳಬೇಕು. ವಿಶ್ವದೆಲ್ಲೆಡೆಯಿಂದ ಲಕ್ಷೋ ಪಲಕ್ಷ ಮುಸ್ಲಿ ಮರು ವರ್ಷಕ್ಕೊಮ್ಮೆ ಮಕ್ಕಾ ನಗರ ದಲ್ಲಿ ಒಟ್ಟುಗೂಡುತ್ತಾರೆ. ಆಡಳಿತಗಾರನಾಗಲಿ, ಸೇವಕನಾಗಲಿ; ಎಲ್ಲರೂ ಒಂದೇ ರೀತಿಯ ವಿಧಿಗಳನ್ನು ಅಲ್ಲಿ ನೆರವೇರಿಸಬೇಕು. ಸಮಾನತೆಗೆ ಇಸ್ಲಾಮ್ ಕೊಡುವ ಪ್ರಾಮುಖ್ಯ ಇಲ್ಲಿ ಎದ್ದು ಕಾಣುತ್ತದೆ.
ಕಾಬಾ ಬಳಿಯಲ್ಲೇ ಇರುವ ಮರುಭೂಮಿಯ ಬುಗ್ಗೆಯೇ ಝಮಝಮ್‌ನ ಬಾವಿ. ಅತ್ಯದ್ಭುತ ಗುಣಗಳುಳ್ಳ ಇದರ ನೀರನ್ನು ಲೋಕದ ಮೂಲೆ ಮೂಲೆಗೆ ಮಕ್ಕಾ ಯಾತ್ರಿಗಳು ಕೊಂಡೊಯ್ಯುತ್ತಾರೆ. ಕಾಬಾ ಭವನಕ್ಕೆ ಪ್ರದಕ್ಷಿಣೆಯಿಂದ ಹಿಡಿದು, ಹಾಜಿ ರಾರು ನೀರಿಗಾಗಿ ಓಡಾಡಿದ ಸಫಾ ಮರ್ವ ಬೆಟ್ಟಗಳಿಗೆ ಏರುವ ಎಲ್ಲ ವಿಧಿಗಳೂ ಹಜ್‌ನ ಭಾಗಗಳಾಗಿವೆ.
ಮುಹಮ್ಮದ್ ಪೈಗಂಬರರು ನಿರ್ವಹಿಸಿದ ಹಜ್ ಕ್ರಮಂತೆ ಬಕ್ರೀದ್‌ನ ಮುನ್ನಾ ದಿನ ಅರಫ ಎಂಬ ವಿಶಾಲ ಮೈದಾನದಲ್ಲಿ ಹಾಜಿಗಳೆಲ್ಲರೂ ಸೇರುವುದು ಪ್ರಮುಖ ಮತ್ತು ಕಡ್ಡಾಯ ವಿಧಿಗಳ ಲ್ಲೊಂದು. ಅರಫಾದಲ್ಲಿ ಎರಡು ಹೊತ್ತಿನ ಕಡ್ಡಾಯ ನಮಾಝ್ಗಳನ್ನು ಸಾಮೂಹಿಕವಾಗಿ ನಿರ್ವಹಿಸಿದ ಬಳಿಕ ಜನಸ್ತೋಮಕ್ಕೆ ಉದೊ½àದೆ ನಡೆಸಲಾಗುತ್ತದೆ. ಅಅನಂತರ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಹೃದಯಾಂತರಾಳದಿಂದ ತಮ್ಮ ಗತ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಿ ಪ್ರಾರ್ಥಿಸಿದರೆ ದೇವನು ಪ್ರಾರ್ಥನೆಯನ್ನು ಸ್ವೀಕರಿಸಿ ಪರಿಶುದ್ಧಗೊಳಿಸುತ್ತಾನೆಯೆಂದು ಪ್ರವಾದಿಯವರು ನುಡಿದಿದ್ದಾರೆ. ವಿವಿಧ ವಿಧಿಗಳ ಮೂಲಕ ತಮ್ಮನ್ನು ಸಂಸ್ಕರಿಸಿ, ದೇವವಿಶ್ವಾಸ ಮತ್ತು ದೇವ ಭಯ ವೃದ್ಧಿಸಿ ಹೊಸ ಜೀವನ ಆರಂಭಿಸುವ ಬದ್ಧತೆಯೊಂದಿಗೆ ಹಾಜಿಗಳು ಮರಳುತ್ತಾರೆ.
ಬಕ್ರೀದ್: ಹಜ್‌ನ ಪ್ರಮುಖ ವಿಧಿಯಾಗಿ ಅಲ್ಲಿ ಒಂದೇ ಹೊತ್ತು ಎಲ್ಲ ಹಜ್ ಯಾತ್ರಿಗಳೂ ಅರಫಾ ಮೈದಾನದಲ್ಲಿ ಸೇರುವ ದಿನ ಹಾಜಿಗಳ ಜತೆಗೆ ಸಾಮರಸ್ಯ ತೋರುವ ಸಲುವಾಗಿ ಲೋಕದೆಲ್ಲೆಡೆ ಇತರ ಮುಸ್ಲಿಮರು ಆ ಒಂದು ದಿನ ಉಪವಾಸ ಆಚರಿಸುತ್ತಾರೆ. ಮರುದಿನ ಬಕ್ರೀದ್‌ನಂದು ನಡೆ ಯುವ ವಿಶೇಷ ನಮಾಝ್ ಅನಂತರದ ಉದೊ½à ದೆಯಲ್ಲಿ ಇಬ್ರಾಹೀಮರ ದೇವಾರ್ಪಣೆಯ ಮಾದರಿ ಯನ್ನು ನೆನಪಿಸಲಾಗುತ್ತದೆ. ಅಂದಿನಿಂದ ಮೂರು ದಿನಗಳಲ್ಲಿ ಲೋಕದೆಲ್ಲೆಡೆಯ ಮುಸ್ಲಿಮರು ಆಹಾರದ ಪ್ರಾಣಿಗಳ ಬಲಿ ಕೊಡುವುದು ಈ ಅವಿಸ್ಮರಣೀಯ ಪರೀಕ್ಷೆ, ತ್ಯಾಗದ ಸ್ಮರಣಾರ್ಥ ಮತ್ತು ಅನುಕರಣೀಯ ದೈವ ಸಮರ್ಪಣ ಭಾವವಾಗಿದೆ.
– ಅಬ್ದುಲ್ ಅಜೀಜ್, ಉದ್ಯಾವರ, ಧಾರ್ಮಿಕ ಚಿಂತಕರು