Advertisement

ಕೇಶಾಲಂಕಾರ ಭೂಷಿತೆ…

01:23 PM Oct 08, 2020 | mahesh |

ಹೆಣ್ಣಿನ ಅಂದಕ್ಕೆ ವಿಶೇಷ ಮೆರಗು ನೀಡುವುದೇ ಕೂದಲು. ಅದಕ್ಕಾಗಿಯೇ ಹುಡುಗಿಯರು ತಮ್ಮ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು. ಯಾವ ಡ್ರೆಸ್‌ಗೆ, ಯಾವ ಬಗೆಯಲ್ಲಿ ಹೇರ್‌ಸ್ಟೈಲ್‌ ಮಾಡುವುದಪ್ಪಾ ಅಂತ ತಲೆ ಕೆಡಿಸಿಕೊಳ್ಳುವುದು. ಕೇಶ ವಿನ್ಯಾಸವೇನು ಬ್ರಹ್ಮವಿದ್ಯೆಯೇ? ಅದರ ಬಗ್ಗೆ ಸ್ವಲ್ಪ ಆಸಕ್ತಿ, ಸ್ವಲ್ಪ ಅರಿವು, ಯಾವ ಮುಖಕ್ಕೆ (ಆಕಾರ) ಯಾವ ಶೈಲಿ ಸೂಕ್ತವೆಂಬ ಜ್ಞಾನವಿದ್ದರೆ ಸಾಕು; ಸುಂದರವಾಗಿ ಮುಡಿಯನ್ನು ಸಿಂಗರಿಸಿಕೊಳ್ಳಬಹುದು. ಅಂಥ ಕೆಲವು ಹೇರ್‌ಸ್ಟೈಲ್‌ಗ‌ಳು ಇಲ್ಲಿವೆ…

Advertisement

1. ಫ್ರಂಟ್‌ ಬಂಪ್‌
ಇದು ಹಳೆಯ ವಿನ್ಯಾಸವಾಗಿದ್ದರೂ, ಇಂದಿಗೂ ಚಾಲ್ತಿಯಲ್ಲಿದೆ. ಫ್ರಂಟ್‌ ಬಂಪ್‌ ಮಾಡಿ, ಕೂದಲನ್ನು ಫ್ರೀ ಬಿಡಬಹುದು ಅಥವಾ ಜುಟ್ಟನ್ನು ಹಾಕಿಕೊಳ್ಳಬಹುದು. ದುಂಡು ಮುಖದವರಿಗೆ ಈ ಹೇರ್‌ಸ್ಟೈಲ್‌ ಚೆನ್ನ.

2. ಅಪ್‌ ಡು
ಎಲ್ಲಾ ಬಗೆಯ ಮುಖದ ಆಕಾರಕ್ಕೂ ಅಪ್‌ ಡು ಕೇಶ ವಿನ್ಯಾಸ ಹೊಂದುತ್ತದೆ. ಮದುವೆ, ಆರಕ್ಷತೆ ಹಾಗೂ ರಾತ್ರಿ ಪಾರ್ಟಿಗಳಿಗೆ ಹೆಚ್ಚು ಸೂಕ್ತ. ಗುಂಗುರು ಕೂದಲಿನವರಿಗೆ ಮುದ್ದಾಗಿ ಕಾಣುವ ಈ ವಿನ್ಯಾಸ, ಮಾಡರ್ನ್ ಲುಕ್‌ ನೀಡುತ್ತದೆ.

3. ಹಾಫ್ ಅಪ್‌ ಹಾಫ್ ಡೌನ್‌
ಗೌನ್‌ ತೊಟ್ಟಾಗ, ಪಾಶ್ಚಾತ್ಯ ಹಾಗೂ ಆಧುನಿಕ ದಿರಿಸುಗಳಲ್ಲಿ ಸ್ಟೈಲಿಶ್‌ ಆಗಿ ಕಾಣಲು ಈ ವಿನ್ಯಾಸ ಸೂಕ್ತ.

4. ಪೋನಿ ಟೇಲ್‌
ಕೂದಲು ತೆಳ್ಳಗಿರುವವರು ಪೋನಿ ಟೇಲ್‌ ಹಾಕಿಕೊಳ್ಳಬಹುದು. ಈ ವಿನ್ಯಾಸದಲ್ಲಿ ಕೂದಲು ದಪ್ಪವಾಗಿ, ಆರ್ಷಕವಾಗಿ ಕಾಣುತ್ತದೆ. ನಿತ್ಯ ಕಚೇರಿಗೆ ಹೋಗುವವರಿಗೆ, ಪ್ರಯಾಣ ಮಾಡುವವರಿಗೆ ಈ ವಿನ್ಯಾಸ ಒಪ್ಪುತ್ತದೆ.

Advertisement

5. ಮೆಸ್ಸಿ ಬನ್‌
ಎಲ್ಲ ಬಗೆಯ ಕೇಶ ರಾಶಿಯವರಿಗೆ, ಪಾಶ್ಚಾತ್ಯ ದಿರಿಸಿರಲಿ, ಸಾಂಪ್ರದಾಯಿಕ ಉಡುಗೆಯಿರಲಿ ಎಲ್ಲದಕ್ಕೂ ಒಗ್ಗಿಕೊಳ್ಳುವ ಸಾರ್ವಕಾಲಿಕ ವಿನ್ಯಾಸವಿದು. ದುಂಡು ಮುಖದವರಿಗೆ ಹೇಳಿ ಮಾಡಿಸಿದ್ದು.

6. ಸೈಡ್‌ ಬ್ರೆಡ್‌
ಗಿಡ್ಡ ಹಾಗೂ ಪದರುಗಳುಳ್ಳ ಕೂದಲಿಗೆ ಈ ವಿನ್ಯಾಸ ಒಪ್ಪುತ್ತದೆ. ಮೆಸ್ಸಿ ಬ್ರೆçಡ್‌ ವಿನ್ಯಾಸ ಮದುವೆಗಳಲ್ಲಿ ಟ್ರೆಂಡ್‌ ಆಗಿದೆ. ಹೃದಯಾಕಾರದ ಮುಖದವರು ಈ ಕೇಶ ವಿನ್ಯಾಸದಲ್ಲಿ ಮತ್ತಷ್ಟು ಮುದ್ದಾಗಿ ಕಾಣಿಸುತ್ತಾರೆ.

7. ಸಹಜ ಹೂವುಗಳ ಬಳಕೆ
ಕೂದಲಿನ ಸೌಂದರ್ಯಕ್ಕೆ ಸಹಜ ಹೂವುಗಳನ್ನು ಬಳಸಬಹುದು. ಸಾಂಪ್ರದಾಯಿಕ ಉಡುಗೆ ತೊಟ್ಟಾಗ ಸಹಜ ಹೂವುಗಳಿಂದ ಶೃಂಗರಿಸಿಕೊಳ್ಳಿ. ಮೊಗ್ಗಿನ ಜಡೆ ಸಾಂಪ್ರದಾಯಿಕ ಉಡುಗೆಗೆ ಹೇಳಿ ಮಾಡಿಸಿದ ಅಲಂಕಾರ. ಉದ್ದ ಕೂದಲಿನವರು, ಹೂಗಳ ಹಾರವನ್ನು ಜಡೆಗೆ ಸುತ್ತಬಹುದು. ಕುಚ್ಚನ್ನು ಕೂಡಾ ಬಳಸಬಹುದು.

8. ಕೇಶ ಕಿರೀಟ ಬಳಕೆ
ಕೇಶ ವಿನ್ಯಾಸವನ್ನು ಮತ್ತಷ್ಟು ಆಕರ್ಷಕವಾಗಿಸಲು ಕೇಶಕಿರೀಟದ ಬಳಕೆ ಮಾಡಬಹುದು. ಗೌನ್‌ ತೊಟ್ಟಾಗ ಕೇಶ ಕಿರೀಟ ಬಳಸಿ ಕೂದಲನ್ನು ಸಿಂಗರಿಸಿದರೆ ಮತ್ತಷ್ಟು ಸುಂದರವಾಗಿ ಕಾಣುತ್ತದೆ.

ಭಾಗ್ಯ ಆರ್‌.ಗುರುಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next