Advertisement

Hair Growth: ಉದ್ದ ಮತ್ತು ಹೊಳಪಿನ ಕೂದಲಿಗೆ ಇವು ಉತ್ತಮ ನೈಸರ್ಗಿಕ ವಿಧಾನಗಳು!

06:02 PM Aug 27, 2024 | ಕಾವ್ಯಶ್ರೀ |

ಉದ್ದ ಮತ್ತು ಹೊಳಪುಳ್ಳ ಕೂದಲು ಬಹುತೇಕ ಪ್ರತಿಯೊಬ್ಬ ಮಹಿಳೆಯರು ಬಯಸುತ್ತಾರೆ. ತಲೆ ಕೂದಲು ಉದ್ದವಾಗಿದ್ದರೆ ಸುಂದರವಾಗಿ ಕಾಣುತ್ತದೆ. ಹೆಚ್ಚಿನ ಮಹಿಳೆಯರು ಉದ್ದವಾದ ಮತ್ತು ನುಣುವಾದ ಕೂದಲು ಹೊಂದಬೇಕೆಂದು ಅಪೇಕ್ಷಿಸುತ್ತಾರೆ.

Advertisement

ಕೂದಲ ಬೆಳವಣೆಗೆಗೆ ಆಯುರ್ವೇದ ವಿಧಾನಗಳು ನೂರಾರು ವರ್ಷಗಳಿಂದ ಬಳಕೆಯಲ್ಲಿವೆ. ಅವು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ. ಆದ್ದರಿಂದ, ಅವು ಬಳಕೆಗೆ ಸುರಕ್ಷಿತವಾಗಿರುತ್ತವೆ.

ಇಲ್ಲಿ ಕೆಲ ಆಯುರ್ವೇದದ ವಿಧಾನಗಳ ಮೂಲಕ ಉದ್ದ ಕೂದಲನ್ನು ಪಡೆಯಬಹುದಾದ ವಿಧಾನಗಳನ್ನು ತಿಳಿಸಿಕೊಡಲಾಗಿದೆ.

ಭೃಂಗರಾಜ್: ಉದ್ದ ಕೂದಲನ್ನು ಹೊಂದಲು ಭೃಂಗರಾಜ ರಸ ಉತ್ತಮ ಆಯುರ್ವೇದ ಪರಿಹಾರ. ಭೃಂಗರಾಜನನ್ನು ‘ಮೂಲಿಕೆಗಳ ರಾಜ’ ಎಂದೂ ಕರೆಯಲಾಗುತ್ತದೆ. ಭೃಂಗರಾಜ್ ರಸವನ್ನು ಕೂದಲಿಗೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಬಹುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ಬಳಸಬೇಕು. ಕೂದಲ ಆರೋಗ್ಯಕ್ಕಾಗಿ ಭೃಂಗರಾಜ್ ಎಣ್ಣೆಯನ್ನು ಕೂಡಾ ಬಳಸಬಹುದು.

Advertisement

ತೆಂಗಿನ ಎಣ್ಣೆ: ಕೂದಲಿಗೆ ಒದಗಿಸಬಹುದಾದ ಅತ್ಯಂತ ಪರಿಣಾಮಕಾರಿ ಆಯುರ್ವೇದ ಚಿಕಿತ್ಸೆಗಳಲ್ಲಿ ತೆಂಗಿನ ಎಣ್ಣೆಯೂ ಒಂದಾಗಿದೆ. ತೆಂಗಿನ ಎಣ್ಣೆ ಅಗಾಧವಾದ ಪ್ರಯೋಜನಗಳನ್ನು ಹೊಂದಿದೆ. ಒಂದು ಪ್ರಯೋಜನವೆಂದರೆ ಅದು ಉದ್ದ ಮತ್ತು ಹೊಳೆಯುವ ಕೂದಲನ್ನು ಹೊಂದಲು ಸಹಾಯ ಮಾಡುತ್ತದೆ. ಇದು ತಲೆಯ ನೆತ್ತಿಯನ್ನು ಪೋಷಿಸುತ್ತದೆ ಮತ್ತು ಆರೋಗ್ಯವಾಗಿಡುತ್ತದೆ. ತಲೆಗೆ ಸ್ನಾನ ಮಾಡುವ ಅರ್ಧ ಗಂಟೆಗೆ ಮುನ್ನ ಕೂದಲಿಗೆ ತೆಂಗಿನ ಎಣ್ಣೆ ಹಚ್ಚಿಕೊಳ್ಳಬೇಕು. ತೆಂಗಿನ ಎಣ್ಣೆ ನೆತ್ತಿಯನ್ನು ಆರೋಗ್ಯವಾಗಿಡಲು ಕೂಡಾ ಸಹಾಯ ಮಾಡುತ್ತದೆ.

ಆಮ್ಲಾ: ಆಮ್ಲಾ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುವ ಮತ್ತೊಂದು ಉತ್ತಮ ಔಷಧವಾಗಿದೆ. ಆಮ್ಲಾ ಅನೇಕ ಪ್ರಯೋಜನಗಳನ್ನು ಹೊಂದಿದೆ. ಆರೋಗ್ಯಕರ ಮತ್ತು ಉದ್ದನೆಯ ಕೂದಲು ಹೊಂದಲು ಆಮ್ಲಾ ಸಹಕಾರಿಯಾಗಿದೆ. ಒಣ ಆಮ್ಲಾವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ನಂತರ ನೆತ್ತಿಯ ಮೇಲೆ ಹಚ್ಚಬೇಕು. ಇದು ಕೂದಲಿನ ಆರೋಗ್ಯಕ್ಕೆ ಉತ್ತಮ.

ಅಶ್ವಗಂಧ: ಅಶ್ವಗಂಧವು ಆಯುರ್ವೇದದಲ್ಲಿ ಬಳಸಲಾಗುವ ಬಹಳ ಮುಖ್ಯವಾದ ಗಿಡಮೂಲಿಕೆ. ಅಶ್ವಗಂಧ ಕೂದಲ ಬೆಳವಣೆಗೆಗೆ, ಕೂದಲು ಉದುರುವುದಕ್ಕೆ, ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ನಿಂಬೆ ಸಿಪ್ಪೆ ಮತ್ತು ಕರಿಬೇವಿನ ಎಲೆಗಳು: ಕೂದಲ ಆರೋಗ್ಯಕ್ಕೆ ಕರಿಬೇವಿನ ಎಲೆಗಳು ಮತ್ತು ನಿಂಬೆ ಸಿಪ್ಪೆಯ ಮಿಶ್ರಣ ಬಳಸಬಹುದು. ಈ ಮಿಶ್ರಣಕ್ಕೆ ಹಸಿರು ಬೇಳೆ ಮತ್ತು ಮೆಂತ್ಯ ಬೀಜಗಳನ್ನು ಸೇರಿಸಬಹುದು ಅಥವಾ ನಿಂಬೆ ಸಿಪ್ಪೆ- ಕರಿಬೇವಿನ ಎಲೆಗಳನ್ನು ಮಾತ್ರವೂ ಬಳಸಬಹುದು. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಶಾಂಪೂ ಬಳಸಿ ಕೂದಲು ತೊಳೆಯಬೇಕು. ಇದನ್ನು ಬಳಸುತ್ತಾ ಕೆಲ ದಿನಗಳಲ್ಲೇ ಉದ್ದವಾದ ಮತ್ತು ಆರೋಗ್ಯಕರ ಕೂದಲನ್ನು ಪಡೆಯಬಹುದು.

ಇವಿಷ್ಟು ಕೂದಲು ಪೋಷಿಸಲು ಮತ್ತು ಅವುಗಳನ್ನು ಬೆಳೆಯಲು ಬಳಸಬಹುದಾದ ಅತ್ಯುತ್ತಮ ಆಯುರ್ವೇದ ಪರಿಹಾರ.

Advertisement

Udayavani is now on Telegram. Click here to join our channel and stay updated with the latest news.

Next