Advertisement
ಕೇವಲ ಆಸೆ: ಕಳೆದ 15 ದಿನಗಳಿಂದ ಸಣ್ಣ ಸೋನೆ ಮಳೆ ಬಿದ್ದು ರೈತರಲ್ಲಿ ಆಸೆ ಚಿಗುರಿತ್ತಾದರೂ ಸೆಖೆ ತೀವ್ರವಾಗಿ ಮತ್ತಷ್ಟು ನಿರಾಸೆ ಮೂಡಿಸುತ್ತಿದೆ.
Related Articles
Advertisement
ಪಶುಸಂಗೋಪನೆಗೂ ಕಂಟಕ: ತೆಂಗು ಉಳಿದರೆ ಉಳಿಯಲಿ, ಬಿಟ್ಟರೆ ಬಿಡಲಿ ಎಂದುಕೊಂಡು ಹತಾಶಭಾವದಿಂದ ಇಲ್ಲಿನ ರೈತರ ತಮ್ಮ ದಿನನಿತ್ಯದ ಬದುಕು ಸಾಗಿಸಲು ಪೂರ್ಣಪ್ರಮಾಣದಲ್ಲಿ ಪಶುಸಂಗೋಪನೆಯನ್ನೇ ಅವಲಂಬಿಸಿದ್ದಾರೆ. ಆದರೆ, ಮಳೆ ಸಂಪೂರ್ಣ ಮುನಿಸಿಕೊಂಡಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಳೆದ ವರ್ಷವೂ ಮಳೆ ಇಲ್ಲದ್ದರಿಂದ ರೈತರ ಬಳಿ ಮೇವು ಖಾಲಿಯಾಗಿದೆ. ಈಗ ಅನಿವಾರ್ಯವಾಗಿ ಮೇವು ಖರೀದಿಸಲು ತಾಲೂಕಿನ ರೈತರು ದುಂಬಾಲು ಬೀಳುತ್ತಿದ್ದರೂ ಮೇವು ದುಬಾರಿಯಾಗಿದೆಯಲ್ಲದೆ ಸಿಗುವುದೂ ಕಷ್ಟವಾಗಿದೆ.
ಕೆರೆಗಳಲ್ಲಿ ನೀರಿಲ್ಲ: ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳಲ್ಲಿ ಪಶು-ಪಕ್ಷಿಗಳಿಗೂ ಕುಡಿಯಲು ಹನಿ ನೀರಿಲ್ಲ. ಆಡು, ಕುರಿ, ದನಕರುಗಳಿಗೆ ರೈತರು ಗ್ರಾಮದ ಕಿರುನೀರು ಸರಬರಾಜು ಟ್ಯಾಂಕ್‌ಗಳನ್ನೇ ಅವಲಂಬಿಸಬೇಕಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಆತಂಕದ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನ ಒಳಗಡೆಯೇ ಹೇಮಾವತಿ ನಾಲೆಯಲ್ಲಿ 6 ತಿಂಗಳು ನೀರು ಹರಿದರೂ ತಾಲೂಕು ಆಡಳಿತ ಮಾತ್ರ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಪ್ರಯತ್ನ ಮಾಡದೆ ಕೇವಲ ಸಬೂಬು ಹೇಳಿಕೊಂಡು ರೈತರಿಗೆ ಅನ್ಯಾಯ ಮಾಡಿದ್ದು, ನೋಡಿದರೆ ತಾಲೂಕು ಆಡಳಿತ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಜನಪ್ರತಿನಿಧಿಗಳು, ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಇಲ್ಲಿನ ತೆಂಗುಬೆಳೆಗಾರರ ಬದುಕು ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿದೆ.
ಒಟ್ಟಾರೆ ಬರದ ನಡುವೆ ಬದುಕು ಸವೆಸುತ್ತಿರುವ ಬೆಳೆಗಾರರ ಸಂಕಷ್ಟಗಳ ಬಗ್ಗೆ, ತೆಂಗುವಿನಾಶದ ಬಗ್ಗೆ ಸರ್ಕಾರಕ್ಕೆ ಸಮರ್ಪಕ ಮಾಹಿತಿ ನೀಡುವ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದಿರುವುದು ರೈತರಲ್ಲಿ ಆಕ್ರೋಶ ಉಂಟುಮಾಡಿದೆ. ಇನ್ನಾದರೂ ಸರ್ಕಾರ ಕಲ್ಪತರು ನಾಡಿನ ತೆಂಗುಬೆಳೆಗಾರರ ನೆರವಿಗೆ ಧಾವಿಸಿ ಶೀಘ್ರ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಿ ವಿನಾಶದತ್ತ ಸಾಗಿರುವ ತೆಂಗುಬೆಳೆ ಹಾಗೂ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವುದೋ ಕಾಯ್ದು ನೋಡಬೇಕಿದೆ.
* ಬಿ.ರಂಗಸ್ವಾಮಿ