ಸಂಪೂರ್ಣ ಹಾಳಾಗಿ ರೈತರನಿಗೆ ಲಕ್ಷಾಂತರ ರೂಪಾಯಿ ನಷ್ಟ
ಸಂಭವಿಸಿದೆ. ಹರಿಹರಪುರ ಗ್ರಾಮದ ರೈತ ಸ್ವಾಮಿ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಬೂದುಗುಂಬಳ ಬೆಳೆ ಇನ್ನೇನು ಒಂದೆರಡು ದಿನಗಳಲ್ಲಿ ಬೆಳೆ ಕೊಯ್ಲು ಮಾಡಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಷ್ಟರಲ್ಲಿ ಆಲಿಕಲ್ಲು
ಮಳೆ ಸುರಿದು ಕುಂಬಳಕಾಯಿಗೆ
ಹಾನಿಯಾಗಿ ಗದ್ದೆಗಳಲ್ಲಿಯೆ
ಕೊಳೆಯಲು ಆರಂಭಿಸಿದೆ.
ಸ್ವಾಮಿ ಎರಡು ಎಕರೆ ಜಮೀನಿನಲ್ಲಿ
ಬೂದುಗುಂಬಳ ಬೆಳದಿದ್ದರು. ನಾಟಿ
ಸೇರಿ ಬೆಳೆ ನಿರ್ವಹಣೆಗೆ 2 ಲಕ್ಷ ರೂ.
ಖರ್ಚು ಮಾಡಿ ಬೆಳೆದಿದ್ದರು. ಇನ್ನೂ
ಒಂದು ವಾರದಲ್ಲಿ ಕೊಯ್ಲು
ಮಾಡಬೇಕಿತ್ತು. ತಾಲೂಕಿನಲ್ಲಿ ಸುರಿದ
ಆಲಿಕಲ್ಲು ಮಳೆಗೆ ಬೂದುಗುಂಬಳ
ಕಾಯಿ ರಂದ್ರಾಕಾರದಲ್ಲಿ ಕೊರೆದಿದ್ದು,
ಸಂಪೂರ್ಣ ಬೆಳೆ ನಷ್ಟವಾಗಿದೆ. ಉತ್ತಮ
ಇಳುವರಿ ಕೂಡ ಬರಲಿದೆ ಎಂದು ರೈತ
ಭರವಸೆಯಲ್ಲಿದ್ದರು.
ಆದರೆ ಮಳೆಯಿಂದಾಗಿ ನಷ್ಟ
ಸಂಭವಿಸಿದ್ದು, ಕೈಗೆ ಬಂದ ತುತ್ತು
ಬಾಯಿಗೆ ಬಾರದಂತಾಗಿದೆ. ಇದರಿಂದ
ಸ್ವಾಮಿ ಕಂಗಲಾಗಿದ್ದು ತಾಲೂಕು ಆಡಳಿತ
ಬೆಳೆ ನಷ್ಟ ಪರಿಹಾರ ಕೊಡಬೇಕು ಎಂದು
ಮನವಿ ಮಾಡಿದ್ದಾರೆ.
Advertisement