Advertisement

ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆಮುಕ್ತಿ

03:03 PM Dec 09, 2019 | Naveen |

ಹಗರಿಬೊಮ್ಮನಹಳ್ಳಿ: ಮಠಮಾನ್ಯಗಳು ಧರ್ಮ ಜಾಗೃತಿ ಜತೆಗೆ ಸಾಮೂಹಿಕ ಮದುವೆ ಮೂಲಕ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುತ್ತಿರುವುದು ಸ್ವಾಗತಾರ್ಹ ಎಂದು ಶಾಸಕ ಭೀಮಾನಾಯ್ಕ ತಿಳಿಸಿದರು.

Advertisement

ಪಟ್ಟಣದಲ್ಲಿ ಹಾಲಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾನುವಾರ ಅವರು ಮಾತನಾಡಿದರು. ಪಟ್ಟಣದ ಹಾಲಸ್ವಾಮಿ ಮಠ ಸಾವಿರಾರು ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸಿ ಬಡ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸಿದೆ.

ಹಾಲಸ್ವಾಮೀಜಿಯವರ ಮಠದ ಅಭಿವೃದ್ಧಿಗೆ ಅನುದಾನವನ್ನು ನೀಡುವ ಮೂಲಕ ಅಭಿವೃದ್ಧಿಪಡಿಸಲಾಗುವುದು. ಮಠಮಾನ್ಯಗಳ ಸಮಾಜಮುಖೀ ಕಾರ್ಯಕ್ರಮಗಳಿಗೆ ಪೂರ್ಣ ಬೆಂಬಲವಿದೆ. ಕ್ಷೇತ್ರದ ಮಠಗಳು ಸಮಾಜಮುಖೀ ಕಾರ್ಯಕ್ರಮಗಳು ಗುರುತಿಸಿಕೊಂಡಿವೆ. ಇತ್ತೀಚೆಗೆ ಸಮಾಜದಲ್ಲಿ ಜಾತಿ ಏಣಿಶ್ರೇಣಿ ವ್ಯವಸ್ಥೆ ತೊಲಗುತ್ತಿರುವುದು ಸಂತೋಷಕರ ಎಂದರು.

ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಧಾರ್ಮಿಕ ಶ್ರದ್ಧೆ ಶಿಸ್ತುಬದ್ದ ಜೀವನದ ಅಡಿಪಾಯವಾಗಿದೆ. ಮಠಗಳು ಅಭಿವೃದ್ಧಿಯಾದರೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಧರ್ಮದಿಂದ ಅಂತಃಸತ್ವ ಹೆಚ್ಚುತ್ತದೆ ಎಂದರು.

ಹಾಲಶಂಕರ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ, ವಟುದೀಕ್ಷೆ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮುನ್ನ ನಡೆದ ರಕ್ತದಾನ ಶಿಬಿರದಲ್ಲಿ 62ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಶಾಸಕ ಪ್ರಶಂಸಾ ಪತ್ರ ವಿತರಿಸಿದರು.

Advertisement

ಒಟ್ಟು 8 ವಟುಗಳಿಗೆ ದೀಕ್ಷೆ ನೀಡಲಾಯಿತು. ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ. ಮಲ್ಲಿಕಾರ್ಜುನ ಶಿವಾಚಾರ್ಯ, ಸೋಮಶೇಖರ ಶಿವಾಚಾರ್ಯ, ನಂದಿಪುರ ಮಹೇಶ್ವರ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ ಮಾತನಾಡಿದರು. ಹನಸಿ ಶಂಕರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಅಜ್ಜಯ್ಯ ಸ್ವಾಮೀಜಿ, ಶೇಖರಯ್ಯ ಶಾಸ್ತ್ರಿ, ತಿರುಕಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್‌, ಹೆಗ್ಡಾಳ್‌ ರಾಮಣ್ಣ, ತಾಪಂ ಮಾಜಿ ಅಧ್ಯಕ್ಷ ಮಹಾಬಲೇಶ್ವರ ರೆಡ್ಡಿ, ಸದಸ್ಯ ದೇವೇಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕುರಿ ಶಿವಮೂರ್ತಿ, ಮುಖಂಡರಾದ ಹಾಲ್ದಾಳ್‌ ವಿಜಯಕುಮಾರ್‌, ಹಾಲಸ್ವಾಮಿ ಟ್ರಸ್ಟ್‌ನ ಬಿ.ಜಿ.ಬಡಿಗೇರ್‌, ಹೋಟೆಲ್‌ ಸಿದ್ದರಾಜು, ಖಾನಾವಳಿ ಬಸವರಾಜ ಇತರರಿದ್ದರು. ಟ್ರಸ್ಟ್‌ ಎಂ.ಎಂ.ಉಮಾಪತಿ ಸ್ವಾಮಿ, ಜಿ.ಪಂ.ಮಾಜಿ ಸದಸ್ಯ ನಾಗನಗೌಡ, ಮುಖಂಡ ಕರಿಬಸವನಗೌಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next