Advertisement

ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯ

03:37 PM Sep 13, 2019 | Team Udayavani |

ಹಗರಿಬೊಮ್ಮನಹಳ್ಳಿ: ಜನವಾದಿ ಮಹಿಳಾ ಸಂಘಟನೆಯ ತಾಲೂಕು ಪದಾಧಿಕಾರಿಗಳು ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ ಕಚೇರಿ ಮುಂಭಾಗ ಅನಿರ್ದಿಷ್ಟಾವ ಧರಣಿ ಗುರುವಾರ ಆರಂಭಿಸಿದರು.

Advertisement

ಸಂಘಟನೆಯ ತಾಲೂಕು ಕಾರ್ಯದರ್ಶಿ ಸರೋಜಮ್ಮ ಮಾತನಾಡಿ, ನಿವೇಶನರಹಿತ ಎಲ್ಲ ಅರ್ಹ ಬಡವರಿಗೆ ನಿವೇಶನ ವಸತಿ ನೀಡಬೇಕು. ತಾಲೂಕಿನಲ್ಲಿ ಸಾವಿರಾರು ಬಡ ಕುಟುಂಬಗಳು ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ನಿವೇಶನ ಮತ್ತು ವಸತಿರಹಿತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಕಾಳಜಿವಹಿಸಬೇಕು. ಕೂಡಲೇ ಶಾಸಕರು ಸಂಘಟನೆಯ ಮನವಿ ಸ್ವೀಕರಿಸಿ ಬಡವರ ಬದುಕನ್ನು ಹಸನಾಗಿಸಬೇಕು. ಗಗನಕ್ಕೇರುತ್ತಿರುವ ಬೆಲೆಗಳ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಇದರಿಂದಾಗಿ ಬಡ ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ. ನಿರುದ್ಯೋಗ ಮತ್ತು ಉದ್ಯೋಗದ ಅಭದ್ರತೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟದಲ್ಲಿವೆ. ಸರಕಾರಗಳು ಉದ್ಯೋಗ ಭದ್ರತೆ ಕಲ್ಪಿಸುವ ಯೋಜನೆಗಳನ್ನು ರೂಪಿಸಬೇಕು ಎಂದರು.

ಸಂಘಟನೆ ಖಜಾಂಚಿ ಸರ್ದಾರ್‌ ಹುಲಿಗೆಮ್ಮ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಸತಿ, ನಿವೇಶನದ ಕೊರತೆ ಎದುರಿಸುವವರ ಸಂಖ್ಯೆ ಹೆಚ್ಚಿದ್ದು ಜನಪ್ರತಿನಿಗಳು ಇತ್ತ ಗಮನಹರಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಸತಿ ಯೋಜನೆಗೆ ಒದಗುತ್ತಿದ್ದ ಅನುದಾನದ ಪೂರ್ಣ ಮೊತ್ತ ಬಿಡುಗಡೆಗೆ ವಿಳಂಬ ಮಾಡುತ್ತಿರುವುದು ಖಂಡನೀಯ. ಕೂಡಲೇ ಸರಕಾರಿ ಜಮೀನು ಗುರುತಿಸಿ ನಿವೇಶನ ರಹಿತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು. ಸಮುದಾಯ ಸಂಘಟನೆಯ ಬಸವರಾಜ ಕಮ್ಮಾರ್‌, ಅಂಗವಿಕಲರ ಸಂಘದ ಉಸ್ಮಾನ್‌ಬಾಷ ಮಾತನಾಡಿದರು. ಸಂಘಟನೆಯ ಅಧ್ಯಕ್ಷೆ ಜಿ.ರತ್ನಮ್ಮ, ರೈತಸಂಘದ ಶಂಶಾದ್‌ಬೇಗಂ, ಉಪಾಧ್ಯಕ್ಷರಾದ ಜಿ.ಪೆದ್ದಮ್ಮ, ಈರಮ್ಮ, ಸಹಕಾರ್ಯದರ್ಶಿಗಳಾದ ಸರಸ್ವತಿ, ಮಹಾದೇವಿ, ಮುಖಂಡರಾದ ಬಿ.ರೇಣುಕಾ, ಎಂ.ಹುಲಿಗೆಮ್ಮ, ಎಸ್‌ಎಫ್‌ಐ ಸಂಘಟನೆ ಪೂಜಾರ್‌ ಅನಂತ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next