ಇಸ್ಲಾಮಾಬಾದ್ : ಉಗ್ರ ನಿಗ್ರಹ ಸಲುವಾಗಿ ಅಮೆರಿಕ ಪಾಕಿಸ್ಥಾನಕ್ಕೆ ಕೊಟ್ಟಿರುವ 75 ಉಗ್ರರ ಪಟ್ಟಿಯಲ್ಲಿ , ಮುಂಬಯಿ ದಾಳಿಯ ಮಾಸ್ಟರ್ ಮೈಂಡ್, ನಿಷೇಧಿತ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ನ ಹೆಸರು ಇಲ್ಲ ಎಂದು ಪಾಕ್ ವಿದೇಶ ಸಚಿವ ಖ್ವಾಜಾ ಆಸಿಫ್ ಹೇಳದ್ದಾರೆ.
ವಿವಿಧ ಉಗ್ರ ಕೃತ್ಯಗಳಿಗಾಗಿ ತನ್ನ ತಲೆಗೆ ಒಂದು ಕೋಟಿ ಡಾಲರ್ ಇನಾಮನ್ನು ಹೊಂದಿರುವ ಉಗ್ರ ಸಯೀದ್, ಈ ವರ್ಷ ಜನವರಿಯಿಂದ ಪಾಕಿಸ್ಥಾನದಲ್ಲಿ ಗೃಹ ಬಂಧನಲ್ಲಿ ಇದ್ದಾನೆ.
ಸಂಸತ್ತಿನ ಮೇಲ್ಮನೆಯ ಸಭೆಯಲ್ಲಿ ಮಾತನಾಡುತ್ತಿದ್ದ ಆಸಿಫ್, ಅಮೆರಿಕ ನಮಗೆ 75 ಉಗ್ರರ ಪಟ್ಟಿಯನ್ನು ಕೊಟ್ಟಿದೆ; ನಾವು ಅವರಿಗೆ 100 ಉಗ್ರರ ಪಟ್ಟಿಯನ್ನು ಕೊಟ್ಟಿದ್ದೇವೆ’ ಎಂದು ಸೆನೆಟ್‌ರ್‌ಗಳಿಗೆ ಹೇಳಿದರು.
ಅಮೆರಿಕದ ವಿದೇಶ ಸಚಿವ ರೆಕ್ಸ್ ಟಿಲರ್‌ಸನ್ ಅವರು ಈಚೆಗೆ ಪಾಕಿಸ್ಥಾನಕ್ಕೆ ಭೇಟಿಕೊಟ್ಟಿದ್ದ ಸಂದರ್ಭದಲ್ಲಿ ಉಗ್ರರ ಪಟ್ಟಿಯನ್ನು ಪಾಸು ಮಾಡಲಾಗಿತ್ತು.
“ಅಮೆರಿಕ ಪಾಕಿಸ್ಥಾನಕ್ಕೆ ಕೊಟ್ಟಿರುವ ಉಗ್ರರ ಪಟ್ಟಿಯಲ್ಲಿ ಹಕ್ಕಾನಿ ಜಾಲ ಅಗ್ರಸ್ಥಾನದಲ್ಲಿದೆ; ಆದರೆ ಆ ಪಟ್ಟಿಯಲ್ಲಿರುವ ಯಾವುದೇ ಉಗ್ರರು ಪಾಕಿಸ್ಥಾನೀಯರಲ್ಲ’ ಎಂದು ಆಸಿಫ್ ಸೆನೆಟರ್‌ಗಳಿಗೆ ಹೇಳಿದರು.