Advertisement

ಸಯೀದ್‌, ಸಲಾಹುದ್ದೀನ್‌ ವಿರುದ್ಧ ಎನ್‌ಐಎ ಚಾರ್ಜ್‌ ಶೀಟ್‌

07:14 PM Feb 02, 2018 | udayavani editorial |

ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪ್ರವರ್ತಿಸುತ್ತಿರುವ ಮತ್ತು ಅಶಾಂತಿಯನ್ನು ಸೃಷ್ಟಿಸುತ್ತಿರುವ ಆರೋಪಕ್ಕೆ ಗುರಿಯಾಗಿರುವ ಪಾಕಿಸ್ಥಾನ ಮೂಲಕ ಭಯೋತ್ಪಾದಕ ನಾಯಕ ಹಾಗೂ ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಆಗಿರುವ ರಾಗಿರುವ ಹಫೀಜ್‌ ಸಯೀದ್‌ ಮತ್ತು ಸಯ್ಯದ್‌ ಸಲಾಹುದ್ದೀನ್‌ ಹಾಗೂ ಏಳು ಮಂದಿ ಕಾಶ್ಮೀರೀ ಪತ್ಯೇಕತಾವಾದಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ – ಎನ್‌ಐಎ – ಮಾಡಿರುವ ಉಗ್ರ ಆರೋಪಗಳನ್ನು ಇಲ್ಲಿನ ವಿಶೇಷ ನ್ಯಾಯಾಲಯ ವಿಚಾರಣೆಗಾಗಿ ಇಂದು ಶುಕ್ರವಾರ ಸ್ವೀಕರಿಸಿದೆ.

Advertisement

ಎನ್‌ಐಎ ಸಲ್ಲಿಸಿರುವ ಚಾರ್ಜ್‌ ಶೀಟನ್ನು ಪರಿಗಣಿಸಿರುವ ಜಸ್ಟಿಸ್‌ ತರುಣ್‌ ಸೆಹರಾವತ್‌ ಅವರ ನ್ಯಾಯಾಲಯವು ಆರೋಪಿಗಳಿಗೆ ಚಾರ್ಜ್‌ ಶೀಟ್‌ ಪ್ರತಿಗಳನ್ನು ತಲುಪಿಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿದೆ. 

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್‌ 8ಕ್ಕೆ ನಿಗದಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next