Advertisement
ಆಧುನಿಕತೆಯ ಪ್ರಭಾವ, ಉದ್ಯೋಗ ಅರಸಿ ಪಟ್ಟಣ ದತ್ತ ವಲಸೆ, ಕೃಷಿ ಕಾರ್ಮಿಕರ ಕೊರತೆ, ಅತಿಯಾದ ಬೇಸಾಯದ ಖರ್ಚು, ತೋಟಗಾರಿಕೆಯಂತಹ ವಾಣಿಜ್ಯ ಬೆಳೆಗಳ ಪ್ರಭಾವ, ಕೀಟ ರೋಗ ಬಾಧೆ, ಬೆಳೆ ನಷ್ಟ, ಕಾಡು ಪ್ರಾಣಿಗಳ ಹಾವಳಿಯಿಂದ ಕರಾವಳಿ ಜಿಲ್ಲೆಗಳಲ್ಲಿ ಭತ್ತ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿತ್ತು. ಇಂತಹ ಸಂದ ರ್ಭ ಕೇದಾರೋತ್ಥಾನ ಟ್ರಸ್ಟ್, ಧ.ಗ್ರಾ. ಯೋಜ ನೆ ನೀಡಿದ ಪ್ರೋತ್ಸಾಹ ಜನರಲ್ಲಿ ಹೊಸ ಆಶಾವಾದ ಹುಟ್ಟುಹಾಕಿದೆ.
Related Articles
Advertisement
ಭತ್ತದ ಗದ್ದೆಗಳು ಈ ರೀತಿ ನಿರ್ಲಕ್ಷ್ಯಕ್ಕೊಳಗಾದ ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯು ಬೇಸಾಯದ ಖರ್ಚು ಕಡಿಮೆಗೊಳಿಸಿ ಅಧಿಕ ಇಳುವರಿ ಪಡೆಯಲು ಬೇಸಾಯ ಪದ್ಧತಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಿಕೊಂಡು ಶ್ರೀ ಅಭಿಯಾನ, ಯಂತ್ರಶ್ರೀ, ಸಮಗ್ರ ಕೃಷಿ ಪದ್ಧತಿ, ಪರಿಸರ ಸ್ನೇಹಿ ಕೃಷಿ ಇತ್ಯಾದಿ ಕಾರ್ಯಕ್ರಮಗಳ ಮೂಲಕ ರೈತರಿಗೆ ಸಹಕಾರ ನೀಡಿ ನಿರಂತರ ಆದಾಯ ಪಡೆಯಲು ಮಾರ್ಗದರ್ಶನ ನೀಡಲಾಗುತ್ತಿದೆ.
ಹಡಿಲು ಅಭಿವೃದ್ಧಿಗೆ ಕೈಗೊಂಡ ಕ್ರಮಗಳು :
ಹಡಿಲು ಭೂಮಿ ರೈತರ ಗುರುತಿಸುವಿಕೆ ಮತ್ತು ದಾಖಲೀಕರಣ ಮಾಡಿ ಕೃಷಿಕರ ಪ್ರಗತಿಬಂಧು ಸಂಘಗಳನ್ನು ರಚಿಸಲಾಗಿದೆ. ಹಾಳುಬಿದ್ದ ಜಮೀನನ್ನು ಭೂಮಾಲಕರಿಂದ ಗೇಣಿ ಅಥವಾ ಉಚಿತವಾಗಿ ಒಪ್ಪಂದದ ಮೇಲೆ ಪಡೆದು ಕೃಷಿ ಮಾಡಲಾಗುತ್ತಿದೆ.
ರೈತರಿಗೆ ತರಬೇತಿ/ಪ್ರಾತ್ಯಕ್ಷಿಕೆ :
ಹಡಿಲು ಭೂಮಿ ಅಭಿವೃದ್ಧಿ ಕ್ಷೇತ್ರ ಉತ್ಸವ, ಕೃಷಿ ಯಂತ್ರೋಪಕಣ ಒದಗಣೆ, ರೈತರಿಗೆ ತಾಂತ್ರಿಕ ಮತ್ತು ಆರ್ಥಿಕ ಸಹಕಾರಗಳನ್ನೂ ನೀಡಲಾಗುತ್ತಿದೆ.
ಗೇಣಿದಾರರೊಂದಿಗೆ ಒಪ್ಪಂದ :
ಪ್ರಗತಿಬಂಧು ತಂಡದ ಸದಸ್ಯರು ತಮ್ಮ ವ್ಯಾಪ್ತಿಯ ಲ್ಲಿರುವ ಹಡಿಲು ಭೂಮಿಯನ್ನು ಗುರುತಿಸಿ ಅದರ ಮಾಲಕ ರೊಂದಿಗೆ ಒಪ್ಪಂದ ಮಾಡಿಕೊಂಡು ಹಡಿಲು ಭೂಮಿ ಪಡೆದು 2ರಿಂದ 5 ವರ್ಷಗಳವರೆಗೆ ಭೂಮಾಲಕರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕೃಷಿ ಅಭಿ ವೃದ್ಧಿ ಪಡಿಸಲು ಅಗತ್ಯ ತಯಾರಿ ಮಾಡಿಕೊಳ್ಳುತ್ತಾರೆ. ಭೂ ಮಾಲಕರು, ಗೇಣಿದಾರರ ನಡುವೆ ಆದ ಒಳ ಒಪ್ಪಂದ ದಂತೆ ಅಲ್ಪಾವಧಿ ಕೃಷಿ (ಭತ್ತ, ತರಕಾರಿ, ಬಾಳೆ…ಇತ್ಯಾದಿ) ಮೂಲಕ ಹಡಿಲು ಭೂಮಿ ಅಭಿವೃದ್ಧಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಹಡಿಲು ಭೂಮಿ ಕೃಷಿ
ತಾಲೂಕು ಪ್ರಸ್ತುತ ವರ್ಷ
(ಎಕ್ರೆ) ಇದುವರೆಗೆ
(ಎಕ್ರೆ)
ಕಾರ್ಕಳ 50 201
ಉಡುಪಿ 62 285
ಬ್ರಹ್ಮಾವರ 44 174
ಕುಂದಾಪುರ 50 265
ಬೈಂದೂರು 50 154
ದ.ಕ., ಉಡುಪಿ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಮತ್ತು ಕಾರ್ಯಕರ್ತರ ಸಹಕಾರದಲ್ಲಿ ಇದುವರೆಗೆ ಒಟ್ಟು 1,391 ಎಕ್ರೆ ಹಡಿಲು ಭೂಮಿಯನ್ನು ಹಸುರು ಭೂಮಿಯನ್ನಾಗಿ ಪರಿವರ್ತನೆ ಮಾಡಿ 473 ಕುಟುಂಬಗಳಿಗೆ ಪ್ರಯೋಜನ ದೊರಕಿಸಲಾಗಿದೆ. ಈ ಬಗ್ಗೆ ಎಲ್ಲ ಗ್ರಾಮಗಳಿಗೂ ತೆರಳಿ ಒಕ್ಕೂಟದ ಸದಸ್ಯರು ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. -ದಿನೇಶ್, ನಿರ್ದೇಶಕರು, ಧ.ಗ್ರಾ. ಯೋಜನೆ