Advertisement

ಹಡಿಲು ಭೂಮಿ ಸದ್ಬಳಕೆಗೆ ಸಮಗ್ರ ನೀತಿ

01:03 PM Apr 18, 2017 | |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪಾಳು ಬಿದ್ದಿರುವ ಭೂಮಿಯ ಸದ್ಬಳಕೆ ಹಾಗೂ ಭತ್ತದ ಬೆಳೆಯನ್ನು ಪ್ರೋತ್ಸಾಹಿಸಲು ಸಮಗ್ರ ನೀತಿ ರೂಪಿಸಲು ಮೇ ಮೊದಲ ವಾರದಲ್ಲಿ ಉಡುಪಿಯಲ್ಲಿ ತಾಂತ್ರಿಕ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ| ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಹೇಳಿದರು.

Advertisement

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮತ್ತು ಕೃಷಿ, ತೋಟಗಾರಿಕೆ ಹಾಗೂ ರೈತರ ಜತೆ ಚರ್ಚೆ ನಡೆಸಿ, ಕೃಷಿಕರ ಪರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ನೀತಿ ನಿರೂಪಿಸಲು ಹಲವು ಶಿಫಾರಸುಗಳನ್ನು ಮಾಡಿರುವುದಾಗಿ ತಿಳಿಸಿದರು. 

ಹಡಿಲು ಭೂಮಿಯ ಸದ್ಬಳಕೆಗಾಗಿ ಕೇಂದ್ರದ ನೀತಿ ಆಯೋಗವು ಹೊರತಂದಿರುವ ಮಾದರಿ ಭೂ ಗುತ್ತಿಗೆ ಕಾಯಿದೆ – 2016 ಕುರಿತು ಕಾರ್ಯಾಗಾರಧಿದಲ್ಲಿ ಸಮಗ್ರ ಮಾಹಿತಿ ನೀಡಲು ಕ್ರಮ ಕೈಗೊಳ್ಳಧಿಲಾಗುವುದು. ಕೇರಳದ ಬೆಸ್ಟ್‌ ಪ್ರಾಕ್ಟಿಸ್‌ಗಳನ್ನು ಚರ್ಚಿಸಲಾಗುವುದು. ಈ ಸಂಬಂಧ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಕುಚ್ಚಿಲಕ್ಕಿ “ಸಿರಿಧಾನ್ಯ’
ಜಿಲ್ಲೆಯ ಕುಚ್ಚಿಲಕ್ಕಿಯನ್ನೂ ಸಿರಿಧಾನ್ಯಧಿವನ್ನಾಗಿ ಘೋಷಿಧಿಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಧಿಬೇಕಿದೆ. ಮಳೆಯಾಶ್ರಿತ ಕುಚ್ಚಿಲಕ್ಕಿಯಲ್ಲಿ ಅತ್ಯುತ್ತಮ ತಳಿಧಿಗಳಿದ್ದು, ಈ ಅಕ್ಕಿಯೂ ಸಿರಿಧಾನ್ಯಕ್ಕೆ ಸಮ ಎಂದು ಪ್ರಕಾಶ್‌ ಕಮ್ಮರಡಿ ಹೇಳಿದರು. ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್‌ ಮತ್ತು ಇತರ ಅಧಿಕಾರಿಗಳು ಹಾಗೂ ರೈತರು ಸಭೆಯಲ್ಲಿದ್ದರು.

11,000 ಹೆಕ್ಟೇರ್‌ ಹಡಿಲು
ಉಡುಪಿ ಜಿಲ್ಲೆಯಲ್ಲಿ 1,20,000 ಹೆಕ್ಟೇರ್‌ ಭತ್ತದ ಕೃಷಿ ಭೂಮಿಯಲ್ಲಿ 11,000 ಹೆಕ್ಟೇರ್‌ ಭೂಮಿ ಹಡಿಲು ಬಿದ್ದಿದ್ದು, ಸಮಸ್ಯೆ ಪರಿಹಾರಕ್ಕೆ ರೈತರ ಜತೆ ಸಮಾಲೋಚನೆ ನಡೆಸಿ ಕೃಷಿ ಉತ್ಪಾದನಾ ನೀತಿಯನ್ನು ರೂಪಿಸುವ ಅಗತ್ಯ, ಕರಾವಳಿ ವ್ಯಾಪ್ತಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆ, ಕೃಷಿ ಯಂತ್ರೋಪಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೈತ ಗುಂಪುಗಳಿಗೆ ನೀಡುವ ಬಗ್ಗೆ, ಕಾಡುಪ್ರಾಣಿಗಳಿಂದ ಕೃಷಿ ನಾಶಧಿವಾದರೆ ಪರಿಹಾರ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

Advertisement

ಮಹಿಳಾ ಗುಂಪುಗಳಿಗೆ ಹಡಿಲು ಭೂಮಿ
ಪಾಳು (ಹಡಿಲು) ಭೂಮಿಯನ್ನು ಕೇರಳದ “ಕುಟುಂಬಶ್ರೀ’ ಮಾದರಿಯಲ್ಲಿ ಮಹಿಳಾ ಗುಂಪುಗಳಿಗೆ ನೀಡಲು ಆದ್ಯತೆ ನೀಡುವ ಬಗ್ಗೆಯೂ ಚರ್ಚೆ ನಡೆಯಿತು. ಕೃಷಿ ಭಾಗ್ಯ ಯೋಜನೆ ವಿಸ್ತರಣೆ, ರೈತರ ಆತ್ಮಹತ್ಯೆ ತಡೆಯಲು ರಾಜ್ಯದ 8 ಜಿಲ್ಲೆಗಳಲ್ಲಿ 8 ಗ್ರಾಮಗಳನ್ನು 8 ಕೆವಿಕೆಗಳ ಮೂಲಕ ದತ್ತು ತೆಗೆದುಕೊಂಡು ಸಮಗ್ರ ಸಮೀಕ್ಷೆ ನಡೆಸಿ ಎಲ್ಲ ಯೋಜನೆಗಳನ್ನು ಇಲ್ಲಿ ಬಳಸಿಕೊಳ್ಳುವುದು, ತಂತ್ರಜ್ಞಾನವನ್ನು ಗ್ರಾಮಗಳಿಗೆ ವರ್ಗಾಯಿಸಿ ರೈತರ ಕಲ್ಯಾಣಕ್ಕೆ ರೂಪಿಸಿರುವ 58 ಕಾರ್ಯಕ್ರಮಗಳನ್ನು ಇಲ್ಲಿ ಅಳವಡಿಸಿ ಅಭಿವೃದ್ಧಿಪಡಿಸುವ ಪೈಲಟ್‌ ಪ್ರಾಜೆಕ್ಟ್ ಅನ್ನು ನಡೆಸಲಾಗಿದೆ ಎಂದು ಡಾ| ಕಮ್ಮರಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next