Advertisement

ಕಾಮನ್ವೆಲ್ತ್‌ ಗೇಮ್ಸ್‌: ನೀರಜ್‌ ಸ್ಫೂರ್ತಿ, ಚಿನ್ನವೇ ಗುರಿ: ಸ್ಮತಿ ಮಂಧನಾ

11:33 PM Jul 22, 2022 | Team Udayavani |

ಬೆಂಗಳೂರು: “ಜಾವೇಲಿನ್‌ ಸ್ಟಾರ್‌ ನೀರಜ್‌ ಚೋಪ್ರಾ ಅವರೇ ನಮಗೆ ಸ್ಫೂರ್ತಿ, ಚಿನ್ನವೇ ನಮ್ಮ ಗುರಿ’ ಎಂಬುದಾಗಿ ಭಾರತದ ಎಡಗೈ ಆಟಗಾರ್ತಿ ಸ್ಮತಿ ಮಂಧನಾ ಹೇಳಿದ್ದಾರೆ. ಕಾಮನ್ವೆಲ್ತ್‌ ಗೇಮ್ಸ್‌ ಗಾಗಿ ಬರ್ಮಿಂಗ್‌ಹ್ಯಾಮ್‌ಗೆ ತೆರಳುವ ಮುನ್ನ ಅವರು ಮಾಧ್ಯಮದವರೊಂದಿಗೆ ಮಾತಾಡಿದರು.

Advertisement

“ನಮಗೆ ನೀರಜ್‌ ಚೋಪ್ರಾ ಖಂಡಿತ ವಾಗಿಯೂ ಸ್ಫೂರ್ತಿ ಆಗಲಿದ್ದಾರೆ. ಟೋಕಿಯೋದಲ್ಲಿ ಚಿನ್ನ ಗೆದ್ದ ಸಾಧನೆ ಅವರದು. ಈ ಕ್ಷಣವನ್ನು ನಾವೆಲ್ಲರೂ ನೆನಪಿಸಿಕೊಂಡು ಆಡಲಿಳಿಯುತ್ತೇವೆ. ಅವರು ಇಲ್ಲಿಯೂ ಹಳದಿ ಪದಕ ಗೆಲ್ಲುವ ರೆಂಬ ನಿರೀಕ್ಷೆ ನಮ್ಮದು. ಹಾಗೆಯೇ ಪೋಡಿಯಂ ಏರುವುದಷ್ಟೇ ನಮ್ಮ ಗುರಿಯಲ್ಲ, ಅಲ್ಲಿ ಚಿನ್ನವನ್ನೇ ನಾವು ಧರಿಸ ಬೇಕು’ ಎಂದು ಮಂಧನಾ ಹೇಳಿದರು.

ಆಸ್ಟ್ರೇಲಿಯ ಎದುರಾಳಿ
ಕೂಟದಲ್ಲಿ ವನಿತಾ ಕ್ರಿಕೆಟ್‌ ಪಂದ್ಯಾವಳಿಯನ್ನು ಅಳವಡಿಸಲಾಗಿದ್ದು, ಭಾರತ ತಂಡ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಜು. 29ರಂದು ಆಸ್ಟ್ರೇಲಿಯವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಬಳಿಕ ಜು. 31ರಂದು ಪಾಕಿಸ್ಥಾನ ವಿರುದ್ಧ ಹಾಗೂ ಆ. 3ರಂದು ಬಾರ್ಬಡಾಸ್‌ ವಿರುದ್ಧ ಆಡಲಿದೆ.

“ಆಸ್ಟ್ರೇಲಿಯ 5 ಬಾರಿಯ ವಿಶ್ವ ಚಾಂಪಿಯನ್‌ ಎಂಬುದು ನಿಜ. ಆದರೆ ಟಿ20 ಪಂದ್ಯಾವಳಿಯಲ್ಲಿ ಯಾವುದೇ ತಂಡ ಯಾವುದೇ ತಂಡವನ್ನು ಮಣಿಸಬಲ್ಲದು. ಹೀಗಾಗಿ ನಾವು ಆಸ್ಟ್ರೇಲಿಯವನ್ನು ಪ್ರಬಲ ತಂಡವೆಂದು ಭಾವಿ ಸುವುದಿಲ್ಲ. ಪಾಕಿಸ್ಥಾನ, ಬಾರ್ಬಡಾಸ್‌ ಎದುರಿನ ಪಂದ್ಯಗಳೂ ನಮಗೆ ಮಹತ್ವ ದ್ದಾಗಿವೆ. ಎಲ್ಲವನ್ನೂ ಗೆಲ್ಲುವುದು ನಮ್ಮ ಯೋಜನೆ’ ಎಂಬುದಾಗಿ ಮಂಧನಾ ಹೇಳಿದರು.

ಅಂದಹಾಗೆ ಈ ವರ್ಷದ ಆರಂಭದಲ್ಲಿ ಆಡಲಾದ ಆಸ್ಟ್ರೇಲಿಯ ಎದುರಿನ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು.

Advertisement

1998ರ ಬಳಿಕ ಕ್ರಿಕೆಟ್‌
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 1998ರ ಬಳಿಕ ಕ್ರಿಕೆಟ್‌ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಅಂದಿನ ಕೌಲಾಲಂಪುರ ಗೇಮ್ಸ್‌ನಲ್ಲಿ ಪುರುಷರ ಲಿಸ್ಟ್‌ “ಎ’ ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.

ಒಬ್ಬರಿಗೆ ಪಾಸಿಟಿವ್‌
ಇಂಗ್ಲೆಂಡ್‌ಗೆ ವಿಮಾನ ಏರುವ ಮೊದಲೇ ಭಾರತದ ತಂಡದ ಓರ್ವ ಆಟಗಾರ್ತಿಯ ಕೋವಿಡ್‌ ಫ‌ಲಿತಾಂಶ ಪಾಸಿಟಿವ್‌ ಬಂದಿದೆ ಎಂದು ವರದಿಯಾಗಿದೆ. ಬಿಸಿಸಿಐ ಇದನ್ನು ದೃಢಪಡಿಸಿದೆಯಾದರೂ ಹೆಸರನ್ನು ಬಹಿರಂಗಪಡಿಸಿಲ್ಲ.

ಇನ್ನೂ ಲಭಿಸಲಿಲ್ಲ ವೀಸಾ!
ಭಾರತದ ವನಿತಾ ತಂಡ ಲಂಡನ್‌ ವಿಮಾನ ಏರಲು ಇರುವುದು ಕೇವಲ 48 ಗಂಟೆಗೂ ಕಡಿಮೆ ಅವಧಿ. ಆದರೂ 6 ಆಟಗಾರ್ತಿಯರ ಹಾಗೂ ಸಹಾಯಕ ಸಿಬಂದಿಯ ವೀಸಾ ಇನ್ನೂ ಲಭಿಸಿಲ್ಲ!

ಈ ನಿಟ್ಟಿನಲ್ಲಿ ಬಿಸಿಸಿಐ, ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದೆ.

“ಇಂದು ಕೆಲವು ವೀಸಾ ಕೈಸೇರಿತು. ಆದರೂ 3 ಆಟಗಾರ್ತಿಯರ ಹಾಗೂ 3 ಸಹಾಯಕ ಸಿಬಂದಿಯ ವೀಸಾ ಬಂದಿಲ್ಲ. ನಾಳೆ ಕೈಸೇರುವ ಸಾಧ್ಯತೆ ಇದೆ’ ಎಂದು ಐಒಎ ಮೂಲವೊಂದು ತಿಳಿಸಿದೆ. ಆಟಗಾರ್ತಿಯರ ಕಿಟ್‌ ಇನ್ನೂ ಬೆಂಗಳೂರು ತಲುಪಿಲ್ಲ. ಶನಿವಾರ ಸಂಜೆಯೊಳಗೆ ತಲುಪುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next