Advertisement

ವಾಟ್ಸ್‌ಆ್ಯಪ್‌ ಸ್ಕ್ರೀನ್‌ ಶೇರಿಂಗ್‌ ಬಳಸಿ ಬ್ಯಾಂಕ್‌ ಖಾತೆಗೆ ಹ್ಯಾಕರ್‌ಗಳ ಕನ್ನ!

11:02 PM Dec 24, 2023 | Team Udayavani |

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಸೈಬರ್‌ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ. ಈ ವರೆಗೆ ಒಟಿಪಿಗಳನ್ನು ಅಕ್ರಮವಾಗಿ ಪಡೆದು ವಂಚಿಸುತ್ತಿದ್ದ ಹ್ಯಾಕರ್‌ಗಳು ಇದೀಗ ವಾಟ್ಸ್‌ಆ್ಯಪ್‌ನ ಸ್ಕ್ರೀನ್‌ ಶೇರಿಂಗ್‌ ಫೀಚರ್‌ ಅನ್ನು ಸೈಬರ್‌ದಾಳಿಗೆ ದಾಳ ವಾಗಿಸಿಕೊಳ್ಳಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್‌ ವಿಡಿಯೋಕಾಲ್‌ಗ‌ಳಿಗಾಗಿ ಸ್ಕ್ರೀನ್‌ ಶೇರಿಂಗ್‌ ಎಂಬ ನೂತನ ಫೀಚರ್‌ ಪರಿಚಯಿಸ ಲಾಗಿದ್ದು ಅದನ್ನೇ ಹ್ಯಾಕರ್‌ಗಳು ಗುರಿಯಾಗಿಸಿಕೊಂಡಿದ್ದಾರೆ.

Advertisement

ವಿಡಿಯೋಕಾಲ್‌ ರಿಕ್ವೆಸ್ಟ್‌ಗಳ, ಮೆಸೇಜ್‌ ಮೂಲಕ ಹಂಚಿಕೆ ಮಾಡುವಂತೆ ಕೋರಿಕೆ ಸಲ್ಲಿಸಲಾಗುತ್ತದೆ. ಬಳಕೆದಾರರು ಅದಕ್ಕೊಪ್ಪಿದ ಕೂಡಲೇ ಮೊಬೈಲ್‌ ಹ್ಯಾಕರ್‌ಗಳ ಕೈಗೆ ಸಿಕ್ಕಂತಾಗು ತ್ತದೆ. ಹೀಗಾಗಿ, ಎಲ್ಲಾ ಮಾಹಿತಿಗಳು ಹ್ಯಾಕರ್‌ಗಳಿಗೆ ಸಿಗುತ್ತದೆ. ಬ್ಯಾಂಕ್‌ ಖಾತೆಗ ಳಿಂದ ಹಣವನ್ನು ದೋಚಲೂ ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂಥ ವಿಚಾರದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್‌ ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next