Advertisement

ಹನಿದೊರೆ “ಡುಂಡಿ’ಗೆ ಅರವತ್ತರ ಅಭಿನಂದನೆ

04:07 PM May 06, 2017 | Team Udayavani |

ಹನಿಗವನಗಳ ರಾಜನೆಂದೇ ಖ್ಯಾತರಾಗಿರುವವರು ಡುಂಡಿರಾಜ್‌. ಅವರಿಗೆ ಈಗ ಅರುವತ್ತರ ಸಡಗರ. ಈ ಸಂದರ್ಭದಲ್ಲಿ ಉಪಾಸನಾ ಟ್ರಸ್ಟ್‌ ಹಾಗು ಶ್ರೀ ಎಚ್‌. ಡುಂಡಿರಾಜ್‌ ಅಭಿನಂದನಾ ಸಮಿತಿ ಮೇ 7, ಭಾನುವಾರ ಸಂಜೆ 4.30 ಕ್ಕೆ ಡುಂಡಿರಾಜರ ಎರಡು ಪುಸ್ತಕಗಳ ಬಿಡುಗಡೆ, ಗೀತಗಾಯನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಹಿರಿಯ ಕವಿ ಡಾ. ಎಚ್‌.ಎಸ್‌. ವೆಂಕಟೇಶಮೂರ್ತಿಯವರು ಅಧ್ಯಕ್ಷತೆ ವಹಿಸುತ್ತಿದ್ದು, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿನಂದನಾ ಭಾಷಣವನ್ನೂ, ಕವಿ ಬಿ.ಆರ್‌. ಲಕ್ಷ¾ಣ ರಾವ್‌ ಪ್ರಾಸ್ತಾವಿಕ ಭಾಷಣವನ್ನೂ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಉಪಾಸನಾ ಮೋಹನ್‌, ಪಂಚಮ್‌ ಹಳಿಬಂಡಿ, ನಾಗಚಂದ್ರಿಕಾ ಭಟ್‌, ಮೇಘನಾ ಭಟ್‌ ಮತ್ತು ಉಪಾಸನಾ ವಿದ್ಯಾರ್ಥಿಗಳಿಂದ ಗೀತಗಾಯನ ನಡೆಯಲಿದೆ.

Advertisement

ಎಲ್ಲಿ?: ಕನ್ನಡ ಸಾಹಿತ್ಯ ಪರಿಷತ್‌, ಚಾಮರಾಜಪೇಟೆ
ಯಾವಾಗ?: ಮೇ 7, ಸಂಜೆ 4.30

Advertisement

Udayavani is now on Telegram. Click here to join our channel and stay updated with the latest news.

Next