Advertisement

ವೈರತ್ವ ಮರೆತು ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಿ

03:30 PM Apr 12, 2019 | keerthan |

ಮೈಸೂರು: ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಈ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ
ಮಾಡಿಕೊಂಡಿದ್ದು, ಜೆಡಿಎಸ್‌ ಕಾರ್ಯ ಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುವಂತೆ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಮನವಿ ಮಾಡಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್‌ ಹಾಕಿದ್ದರೆ, ಸರ್ಕಾರದ ಮಟ್ಟದಲ್ಲಿ ಕೇಸ್‌ಗಳನ್ನು ವಾಪಸ್‌ ತೆಗೆದುಕೊಳ್ಳಲು ಕ್ರಮ ಕೈಗೊಳ್ಳೋಣ, ಈಗ ವೈರತ್ವ ಮರೆತು ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌, ಚಾಮರಾಜ ನಗರ ಕ್ಷೇತ್ರದ ಅಭ್ಯರ್ಥಿ ಧ್ರುವನಾರಾಯಣ, ಮಂಡ್ಯದಲ್ಲಿ ನಿಖೀಲ್‌ ಕುಮಾರ ಸ್ವಾಮಿ, ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಪರ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

13ರಂದು ಸಂಜೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಜಂಟಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ನಿಂಬೆಹಣು ಎಫೆ ಕ್ಟ್ಆಗುತ್ತೆ!
ಮೈಸೂರು: ನಮ್ಮ ಕುಲದೇವರು ಈಶ್ವರ. ನಿಂಬೆಹಣ್ಣು ಹಿಡಿದು ಕೊಳ್ಳುವುದರಿಂದ ಎಫೆಕ್ಟ್ ಆಗುತ್ತೆ, ಅದಕ್ಕೆ ಇಟ್ಟುಕೊಂಡಿರಿನಿ ಎಂದು ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು. ಮಾಟ ಮಂತ್ರ ತಟ್ಟದಿರಲಿ ಅಂತಾ ಬೇಕಾದ್ರೆ ಯಡಿಯೂರಪ್ಪ, ಅಶೋಕ್‌ಗೂ ಒಂದೊಂದು ನಿಂಬೆ ಹಣ್ಣು ಕೊಡಿಸೋಣ! ಕೆ.ಎಸ್‌.ಈಶ್ವರಪ್ಪ ಅವರನ್ನು ಇಷ್ಟೊತ್ತಲ್ಲಿ ಯಾಕೆ ನೆನಸಿ ಕೊಳ್ತೀರಿ,
2018ರ ವಿಧಾನಸಭಾ ಚುನಾವಣೆಗೂ ಮುಂಚೆ ಅವರ ಪರಿಸ್ಥಿತಿ ಹೇಗಿತ್ತು ಅಂತಾ ಗೊತ್ತಿಲ್ವಾ, ನಮ್ಮ ಕಡೆಗೆ ಬರಲು ತಯಾರಾಗಿದ್ರು, ನಮ್ಮ ಬಸ್‌ನಲ್ಲಿರುವವರಿಗೇ ಟಿಕೆಟ್‌ ಇಲ್ಲ. ಆರ್‌ಟಿಒನವ್ರು ಕೇಸ್‌ ಹಾಕಿದ್ರೆ ಏನು ಮಾಡಲಿ ಎಂದು ಹಾಸ್ಯ ಚಟಾಕಿ ಹಾರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next