Advertisement

ಕೋಮುದಳ್ಳುರಿಗೆ ಪ್ರಚೋದನೆ: ಎಚ್‌.ಡಿ.ಕುಮಾರಸ್ವಾಮಿ ಆರೋಪ

09:01 PM Nov 21, 2022 | Team Udayavani |

ಕೋಲಾರ: ಕರಾವಳಿ ಪ್ರದೇಶವು ಮೊದಲೇ ಕೋಮುಗಲಭೆಗೆ ಪ್ರಸಿದ್ಧವಾಗಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿಯವರೇ ಆ ವಾತಾವರಣ ನಿರ್ಮಾಣ ಮಾಡಿರುವುದು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

Advertisement

ಪಂಚರತ್ನ ರಥಯಾತ್ರೆಯಲ್ಲಿರುವ ಅವರು, ಕೋಲಾರ ತಾಲೂಕಿನ ಕೋರಗಂಡಹಳ್ಳಿ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಕ್ಕರ್‌ ಬಾಂಬ್‌ ಸಿಡಿತದಿಂದ ಯುವಕ ಶೇ.60 ಸುಟ್ಟಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕ್ಯಾರಿ ಮಾಡಿ ಆಟೋದಲ್ಲಿ ಹೋಗಿ ಜನನಿಬಿಡ ಪ್ರದೇಶದಲ್ಲಿ ಸಿಡಿಸುವ ಹುನ್ನಾರ ಇರಬಹುದು ಎಂದರು.

ಈ ರೀತಿಯ ಚಟುವಟಿಕೆಗಳಿಂದ ಆ ಭಾಗದ ವಾಣಿಜ್ಯ ವ್ಯವಹಾರ, ಅಭಿವೃದ್ಧಿಗೆ ತೊಂದರೆ ಆಗುತ್ತಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಆಗಬಾರದು. ಶಾಂತಿಯುತವಾದ ರಾಜ್ಯದಲ್ಲಿ ಪದೇಪದೆ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಕೋಮುದಳ್ಳುರಿಗೆ ಪ್ರಚೋದನೆ ನೀಡುವುದು, ಸಾರ್ವಜನಿಕ ಪ್ರತಿಕ್ರಿಯೆ ನೀಡಿ ಗಲಭೆ ಸೃಷ್ಟಿ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಹೇಳಿದರು.

ಈ ರೀತಿಯ ಪ್ರಕರಣವನ್ನು ಖಂಡಿಸುತ್ತೇನೆ. ಇದರ ಹಿಂದೆ ಯಾರೇ ಇದ್ದರೂ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಆಗಲೇ ಬೇಕು. ಕೃತ್ಯಕ್ಕೆ ಗಾಯಾಳು ಯುವಕ ಒಬ್ಬನೆ ಇರುವುದಿಲ್ಲ. ಅವರ ಹಿಂದೆ ಯಾರಿದ್ದಾರೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಅಲ್ಲಿನ ಧಾರ್ಮಿಕ ಗುರುಗಳು ಇಂತಹ ಘಟನೆಗಳಿಗೆ ಪ್ರಚೋದನೆ ನೀಡಬಾರದು. ಗೃಹ ಸಚಿವರ ವೈಫಲ್ಯ ಎನ್ನುವುದಕ್ಕಿಂತ ಗುಪ್ತಚರ ಇಲಾಖೆ ಕೆಲಸವೂ ಮುಖ್ಯ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next