Advertisement

ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ಯಾ?: ಅಡ್ಡಮತದಾನಕ್ಕೆ ಕಿಡಿಕಾರಿದ ಕುಮಾರಸ್ವಾಮಿ

12:56 PM Jun 10, 2022 | Team Udayavani |

ಬೆಂಗಳೂರು: ಇಂದು ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಹಲವೊಂದು ಪ್ರಸಂಗಗಳು ನಡೆಯುತ್ತಿದೆ. ಕೋಲಾರದ ಜೆಡಿಎಸ್ ನಾಯಕ ಶ್ರೀನಿವಾಸ ಗೌಡ ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಕೋಲಾರ ಶಾಸಕರ ನಡೆಗೆ ಜೆಡಿಎಸ್ ನಾಯಕರು ಕಿಡಿಕಾರಿದ್ದು, “ಆ ಮನುಷ್ಯನಿಗೆ ಮಾನಮರ್ಯಾದೆ ಇದೆಯೇ” ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಮಾನಮರ್ಯಾದೆ ಇದ್ದರೆ ರಾಜಕಾರಣ ಮಾಡಲಿ. ಇಂತಹ ಕೆಲಸ ಮಾಡಬಾರದು. ಇದು ಜೆಡಿಎಸ್ ಕಾರ್ಯಕರ್ತರಿಗೆ ಮಾಡಿದ ಅವಮಾನ ಎಂದರು.

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ಮಾಡುವುದನ್ನು ಇವರು ‌ಮಾಡುತ್ತಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಲು ಹೋಗಿದ್ದಾರೆ. ಈ ಅಡ್ಡಮತದಾನದಿಂದ ಕಾಂಗ್ರೆಸ್ ನವರಿಗೆ ಗೆಲ್ಲಲು ಆಗುವುದಿಲ್ಲ. ನಾಡಿನ ಜನತೆ ನೋಡುತ್ತಿದ್ದಾರೆ. ಇವರು ಯಾವ ಮುಖ ಇಟ್ಟು ಬಿಜೆಪಿ ಬಗ್ಗೆ ಮಾತನಾಡುತ್ತಾರೆ?  ಬಿಜೆಪಿ ಗೆಲ್ಲಿಸಲು ಯಾಕೆ ಹೀಗೆ ಮಾಡುತ್ತೀರಿ? ನಿಮ್ಮನ್ನು ಮತ್ತು ಬಿಜೆಪಿಯನ್ನು ಎದುರಿಸುವ ಶಕ್ತಿ ನಮಗಿದೆ ಎಂದು ಗುಡುಗಿದರು.

ಇದನ್ನೂ ಓದಿ:ಮತದಾನದಲ್ಲಿ ಹೈಡ್ರಾಮಾ: ಜೆಡಿಎಸ್ ಶಾಸಕ ರೇವಣ್ಣ ಮತ ಅಸಿಂಧುಗೊಳಿಸುವಂತೆ ಬಿಜೆಪಿ ದೂರು

ಸಿದ್ದರಾಮಯ್ಯ ಟ್ವೀಟ್ ಏನು ‌ಮಾಡಿದ್ದಾರೆ? ಸಂಜೆ ಅವರ ಹಣಬರೆಹ ಗೊತ್ತಾಗುತ್ತದೆ. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬೇಕಾ? ಕಾಂಗ್ರೆಸ್ ನಾಯಕರಿಗೆ ಯಾವುದೇ ನೈತಿಕತೆಯಿಲ್ಲ. ಬಿಜೆಪಿ ಗೆದ್ದರೆ ಕಾಂಗ್ರೆಸ್ ನಿಂದ ಗೆದ್ದಂತೆ. ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next