Advertisement

H. D. Kumaraswamy ನೈತಿಕತೆ ಉಳಿಸಿಕೊಳ್ಳಲು ಪ್ರಜ್ವಲ್‌ ವಾಪಸ್‌ ಬರಬೇಕು

11:44 PM May 22, 2024 | Team Udayavani |

ಮೈಸೂರು: ಪ್ರಜ್ವಲ್‌ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರುತ್ತಿರಲಿಲ್ಲ. ಈಗ ರೇವಣ್ಣನ ಸಂಪರ್ಕದಲ್ಲೂ ಇಲ್ಲ. ನಾನು ಈಗ ಏನಾದರೂ ವಿದೇಶಕ್ಕೆ ಹೋದರೆ, ಪ್ರಜ್ವಲ್‌ ರಕ್ಷಣೆಗೆ ಹೋಗಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಾರೆ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಜ್ವಲ್‌ ವಿದೇಶಕ್ಕೆ ಹೋಗೋದು ಎಂದು ಅವತ್ತೇ ಗೊತ್ತಾಗಿದ್ದರೆ ತಡೆಯುತ್ತಿದ್ದೆ . ಆತ ವಕೀಲರ ಸಲಹೆ ಕೇಳದೆ ನೈತಿಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಸ್‌ ಬರುವಂತೆ ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬದ ಹೆಸರನ್ನು ಸ್ವಲ್ಪ ಮಟ್ಟಿಗೆ ಹಾಳು ಮಾಡಿದ್ದಾರೆ. ಈ ಕುಟುಂಬವನ್ನು ನಾಶ ಮಾಡದೆ ಬಿಡುವುದಿಲ್ಲವೆಂದು ಅವರೇ (ಡಿಕೆಶಿ) ಹೇಳಿದ್ದಾರೆ. ಯಾವ ರೀತಿಯಲ್ಲಿ ಹುನ್ನಾರ ಮಾಡಿದ್ದಾರೆ ಎನ್ನುವುದನ್ನು ಗಮನಿಸಿದ್ದೇನೆ ಎಂದರು.

ಹಾಸನದಲ್ಲಿ ಸರಕಾರಿ
ಪ್ರಾಯೋಜಿತ ಪ್ರತಿಭಟನೆ
ಹಾಸನದಲ್ಲಿ ಮೇ 30ರಂದು ಸರಕಾರದ ಪ್ರಾಯೋ ಜಕತ್ವದಲ್ಲಿ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನಗೆ ಹೇಳಿದ್ದರೆ ನಾನೇ ಒಂದಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳಿಸುತ್ತೇನೆ. ಈ ರೀತಿಯ ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next