Advertisement

Delhi Metroದಲ್ಲಿ ಪ್ರಯಾಣ ಬೆಳೆಸಿ ಸಂತಸ ಹಂಚಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

06:27 PM Aug 04, 2024 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ, ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ದೇವೇಗೌಡ ಅವರು ಭಾನುವಾರ(ಆಗಸ್ಟ್ 4) ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿ ಗಮನ ಸೆಳೆದರು.

Advertisement

ಎಕ್ಸ್ ಪೋಸ್ಟ್ ಮಾಡಿ ವಿಡಿಯೋ ಹಚ್ಚಿಕೊಂಡಿರುವ 91 ರ ಹರೆಯದ ಮಾಜಿ ಪ್ರಧಾನಿ ‘ನಾನು ಲೋಕ ಕಲ್ಯಾಣ್ ಮಾರ್ಗ ನಿಲ್ದಾಣದಲ್ಲಿ ರೈಲು ಹತ್ತಿ ಪ್ರಯಾಣಿಸಿದೆ. ಅದೊಂದು ಆಹ್ಲಾದಕರ ಅನುಭವ. ದೆಹಲಿ ಮೆಟ್ರೋ ಮೂಲಸೌಕರ್ಯ ನಿರ್ದೇಶಕ ಮನೋಜ್ ಸಿಂಘಾಲ್ ಮತ್ತು ಇತರ ದೆಹಲಿ ಮೆಟ್ರೋ ಸಿಬಂದಿ ನನ್ನೊಂದಿಗೆ ತುಂಬಾ ಸಹಕರಿಸಿದರು. ಅವರಿಗೆ ಮತ್ತು ನನ್ನ ಭದ್ರತಾ ಸಿಬಂದಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು’ ಎಂದು ಪೋಸ್ಟ್ ಮಾಡಿದ್ದಾರೆ.

content-img

ಹಲವು ವರ್ಷಗಳಿಂದ #DelhiMetro ನಲ್ಲಿ ಪ್ರಯಾಣಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದು ಇಂದು ನೆರವೇರಿತು. ನಾನು 1996 ರಲ್ಲಿ ಪ್ರಧಾನ ಮಂತ್ರಿಯಾಗಿ ನನ್ನ ಕ್ಯಾಬಿನೆಟ್ ಮತ್ತು ಹೊರಗಿನ ಪ್ರತಿರೋಧದ ನಡುವೆ ಯೋಜನೆಗೆ ಆರ್ಥಿಕ ಸಹಕಾರವನ್ನು ನೀಡಿದ್ದೆ. ಮುಂದೆ ಹೋಗಲು ದೇವರು ನನಗೆ ಧೈರ್ಯ ಕೊಟ್ಟಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ಜನರಿಗೆ ಸಹಾಯ ಮಾಡಿದೆ” ಎಂದು ನೆನಪಿಸಿಕೊಂಡಿದ್ದಾರೆ.

ದೇವೇಗೌಡ ಅವರೊಂದಿಗೆ ಪುತ್ರಿ ಅನಸೂಯ(ಬಿಜೆಪಿ ಸಂಸದ ಡಾ. ಸಿ. ಎನ್ ಮಂಜುನಾಥ್ ಅವರ ಪತ್ನಿ) ಅವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.