Advertisement

ರಾಷ್ಟ್ರೀಯ ಪಕ್ಷಗಳಿಂದ ವಿಭಜಿಸುವ ಕೆಲಸ: ಎಚ್.ಡಿ.ದೇವೇಗೌಡ

07:42 PM May 08, 2022 | Team Udayavani |

ಸಿಂಧನೂರು: ದೇಶದಲ್ಲಿ ಮೋದಿ ಅವರು ಬಂದು 8 ವರ್ಷ ಆಯ್ತು. ಈ ಹಿಂದೆ ಹಲವರು ಇದ್ದರು. ಆಗ ಇಲ್ಲದ ಗಲಾಟೆಗಳು ಈಗ ಯಾಕೆ? ಇದಕ್ಕೆ ರಾಷ್ಟ್ರೀಯ ಪಕ್ಷಗಳೇ ಉತ್ತರಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

Advertisement

ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೂ ದೇವಾಲಯಗಳಲ್ಲಿ ಪ್ರತಿದಿನ ಸುಪ್ರಬಾತ ಹಾಕಲಾಗುತ್ತದೆ. ಮಸೀದಿಗಳಲ್ಲಿ ಆಜಾನ್ ಕೂಗಲಾಗುತ್ತದೆ. ಆದ್ರೆ ಈಗ ಗಲಾಟೆ ಆಗುತ್ತಿದೆ ಅಂದ್ರೆ ಯಾಕೆ? ನಾನು ಇದಕ್ಕೆ ಹೆಚ್ಚಿನ ಮಹತ್ವ ಕೊಡುವುದಿಲ್ಲ. ರಾಜಕೀಯವಾಗಿ ಬಳಸಿಕೊಳ್ಳಲು ಇಂತಹ ವಾತಾವರಣ ಸೃಷ್ಟಿಸಿ, ಜನರನ್ನು ವಿಭಜಿಸುವ ಹುನ್ನಾರಕ್ಕೆ ರಾಷ್ಟ್ರೀಯ ಪಕ್ಷಗಳು ಕೈ ಹಾಕಿದಂತಾಗಿದೆ. ದೇಶದಲ್ಲಿ ಶಾಂತಿ ಇರಬೇಕಾದರೆ, ರಾಷ್ಟ್ರೀಯ ಪಕ್ಷಗಳ ಜವಾಬ್ದಾರಿ ಮುಖ್ಯವಾಗುತ್ತದೆ. ಆದರೆ, ಅವರು ತಮ್ಮ ಶಕ್ತಿ ಬಲಪಡಿಸಿಕೊಳ್ಳಲು ಪ್ರಯತ್ನಿಸಿದ್ರೆ, ಮುಂದಿನ ಪರಿಣಾಮ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಇದನ್ನೂ ಓದಿ: ಪಿಎಸ್‌ಐ ಹಗರಣದ ಪಿತಾಮಹ ಮುಖ್ಯಮಂತ್ರಿ ಬೊಮ್ಮಾಯಿ : ಡಿಕೆಶಿ ಗಂಭೀರ ಆರೋಪ   

ಯಾರ ವಿರುದ್ಧ ಪೈಪೋಟಿಯಲ್ಲ:

ಈವರೆಗೂ ನಮ್ಮ ಹಕ್ಕಿನ ನೀರನ್ನು ಬಳಸಿಕೊಳ್ಳಲು ಆಗಿಲ್ಲ. ಮಹಾದಾಯಿಯಲ್ಲಿ 13 ಟಿಎಂಸಿ ಟ್ರಿಬ್ಯುನಲ್ ಅಡಾಪ್ಟ್ ಮಾಡಿದ್ದರು. ಈವರೆಗೂ 5 ಟಿಎಂಸಿ ನೀರು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಗೋವಾ, ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇವೆ. ಆದರೂ, ನಮ್ಮ ನೀರನ್ನು ಬಳಸಿಕೊಳ್ಳುವ ಶಕ್ತಿ, ಯೋಗ್ಯತೆ ಇದೆಯಾ? ಗೋವಾದಲ್ಲಿ ಎರಡು ಎಂಪಿಗಳಿದ್ದಾರೆ. ಎಲೆಕ್ಷನ್ ಆದ್ಮೇಲೆ ಸರಿ ಹೋಗುತ್ತದೆ ಎಂದಿದ್ದರು. ಅದು ಆಯಿತಾ? ಇಲ್ಲ. ನಾವು ಯಾರ ಮೇಲೂ ಪೈಪೋಟಿಗೆ ಹೋಗುವುದಿಲ್ಲ. ಬಿಜೆಪಿ ಇರ್ಲಿ, ಕಾಂಗ್ರೆಸ್ ಇರ್ಲಿ. ಅವರವು ರಾಷ್ಟ್ರೀಯ ಪಕ್ಷ. ಲಘುವಾಗಿ ಮಾತನಾಡಲು ಹೋಗಲ್ಲ. ನಮ್ಮ ರಾಜ್ಯದಲ್ಲಿನ ನದಿಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಜೆಡಿಎಸ್‍ನಿಂದ ರಾಜ್ಯದಲ್ಲಿ ಜಲಧಾರೆ ಕಾರ್ಯಕ್ರಮ ಮಾಡಲಾಗಿದೆ ಎಂದರು.

Advertisement

ಹಿಡಿಯಲು ಆಗಲ್ಲ:

ಪಕ್ಷಾಂತರ ಪರ್ವದ ವಿಚಾರದ ಬಗ್ಗೆ ಕೇಳಿದಾಗ, ಹೋಗುವಂಥವವರನ್ನು ಹಿಡಿದುಕೊಳ್ಳಲು ಆಗಲ್ಲ. ಜೆಟಿಡಿ ಹೋಗ್ತಾರೆ ಅಂದ್ರು. ಅವರು ಹೋದ್ರಾ? ಜೆಡಿಎಸ್‍ನಲ್ಲೇ ಇದ್ದಾರೆ ಎಂದರು.

ಪಿಎಸ್‍ಐ ನೇಮಕಾತಿ ಹಗರಣದ ಬಗ್ಗೆ ಕೇಳಿದಾಗ ಆ ಬಗ್ಗೆ ಗೊತ್ತಿಲ್ಲ. ಹೀಗಾಗಿ, ಮಾತನಾಡಲು ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಜೆಡಿಎಸ್ ಮುಖಂಡರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next