Advertisement

ಅಷ್ಟು ಕೆಳಮಟ್ಟಕ್ಕೆ ನನನ್ನು ಇಳಿಸಬೇಡಿ, ಮತ್ತೆ ಆ ಪ್ರಶ್ನೆ ಕೇಳಬೇಡಿ: ದೇವೇಗೌಡ

01:01 PM Aug 12, 2021 | Team Udayavani |

ಹೊಸದಿಲ್ಲಿ: “ಅಷ್ಟು ಕೆಳಮಟ್ಟಕ್ಕೆ ನನನ್ನು ಇಳಿಸಬೇಡಿ. ನೀವು ಕೂಡ ಈ ಬಗ್ಗೆ ನನ್ನನ್ನು ಮತ್ತೆ ಮತ್ತೆ ಪ್ರಶ್ನೆ ಮಾಡಬೇಡಿ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ” ಇದು ಸಿಎಂ ಬೊಮ್ಮಾಯಿ ಅವರು ಭೇಟಿಯಾದ ನಂತರ ಪ್ರೀತಮ್ ಗೌಡ ಅಸಮಧಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡ ಉತ್ತರಿಸಿದ ಪರಿ.

Advertisement

ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ನನ್ನ ಮನೆಗೆ ಬಂದಿದ್ದರು. ನನ್ನಿಂದ ಸರಕಾರಕ್ಕೆ ಏನೂ ತೊಂದರೆವಾಗಲ್ಲ ಎಂದಿದ್ದೇನೆ. ನೆಲ ಜಲ ಭಾಷೆ ವಿಚಾರವಾಗಿ ಸಹಕಾರ ನೀಡುತ್ತೇವೆ. ಜೊತೆಗೆ ರಾಜ್ಯದ ಜನತೆ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷ ಎಲ್ಲದಕ್ಕೂ ಸಿದ್ದ ಎಂದು ಹೇಳಿದರು.

ಇದನ್ನೂ ಓದಿ:ಅಧಿಕಾರ ಪಡೆದವರು, ಸಿಗದವರು ಯಾರು ಕೂಡ ಸಂತೋಷದಿಂದಿಲ್ಲ : ಎಸ್.ಆರ್ ಪಾಟೀಲ

ಬಿಜೆಪಿ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಯಡಿಯೂರಪ್ಪ ಮಾರ್ಗದರ್ಶನದಿಂದ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ. ಗೊಂದಲಗಳನ್ನು ನಿಭಾಯಿಸಲು ಬೊಮ್ಮಾಯಿ ಸಮರ್ಥರಿದ್ದಾರೆ ಎಂದುಕೊಂಡಿದ್ದೇನೆ. ಸಿನೀಯರ್ ಬೊಮ್ಮಾಯಿ ನಾನು ಉತ್ತಮ ಗೆಳೆಯರು ಎಂದು ಎಚ್ ಡಿಡಿ ಹೇಳಿದರು.

ಮೋದಿ ನಿರ್ಧಾರಕ್ಕೆ ಸ್ವಾಗತ: ಮೊದಲ ಬಾರಿಗೆ 12 ಮಹಿಳೆಯರಿಗೆ, 8 ಎಸ್ ಸಿ,12 ಎಸ್ ಟಿ ಸಮುದಾಯದ ನಾಯಕರಿಗೆ ಮೋದಿಯವರು ತಮ್ಮ ಸಂಪುಟದಲ್ಲಿ ಅವಕಾಶ ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯವೋ, ಚುನಾವಣೆ ತಂತ್ರವೋ ಗೊತ್ತಿಲ್ಲ, ಆದರೆ ಅದು ಏನೇ ಇದ್ದರೂ ಮೋದಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ, ನಾನು ಪ್ರಧಾನಿಯಾಗಿದ್ದಾಗಲು ಇಂತಹದ್ದೇ ಅವಕಾಶ ಸೃಷ್ಟಿಸಿದ್ದೆ ಎಂದರು.

Advertisement

ಈ ಬಾರಿ ಅಧಿವೇಶದಲ್ಲಿ ನಾನು ಒಂದು ದಿನವೂ ಗೈರಾಗಿಲ್ಲ. ಎಲ್ಲಾ ದಿನದ ಕಲಾಪಗಳಲ್ಲಿ ಭಾಗಿಯಾಗಿದ್ದೇನೆ. ಶನಿವಾರ ರಜೆ ದಿನದಲ್ಲಿ ನಾನು ವಾರಣಾಸಿಗೆ ಹೋಗಿ ಬಂದೆ. ಕಲಾಪದಲ್ಲಿ ಯಾವುದೇ ವಿಷಯಗಳು ಚರ್ಚೆಯಾಗಿಲ್ಲ. ಚರ್ಚೆ ಮಾಡಲು ನಮ್ಮ ವಿರೋಧ ಪಕ್ಷಗಳು ಹಾಗು ಆಡಳಿತ ಪಕ್ಷಗಳು ಅವಕಾಶ ಮಾಡಿಕೊಟ್ಟಿಲ್ಲ. ಎಲ್ಲಾ ಪಕ್ಷಗಳ ನಾಯಕರು ಒಟ್ಟಿಗೆ ಸೇರಿ ಚರ್ಚೆ ನಡೆಸಬೇಕು. ಮುಂದಿನ ಅಧಿವೇಶನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಮಯ ಸಿಗಬಹದು ಎಂದುಕೊಂಡಿದ್ದೇನೆ. ಅವಕಾಶ ಸಿಕ್ಕರೆ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದು ದೇವೇ ಗೌಡರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.