Advertisement

ಏಳು ಲಕ್ಷ ಭಾರತೀಯರಿಗೆ ಈಗ ಗಡಿಪಾರು ಆತಂಕ?

07:47 AM Jan 03, 2018 | |

ವಾಷಿಂಗ್ಟನ್‌: ಅಮೆರಿಕದಲ್ಲಿ ನಾನಾ ಕಡೆ ಕೈತುಂಬ ಸಂಬಳ ಪಡೆಯುವ ಭಾರತ ಸಂಜಾತ ಉದ್ಯೋಗಿಗಳ ಮೇಲೆ ತೂಗುಗತ್ತಿ ನೇತಾಡಲಾ  ರಂಭಿಸಿದೆ. ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ವಿದೇಶಿ ಉದ್ಯೋಗಿಗಳನ್ನು ಅಮೆರಿಕದಿಂದ ಹೊರಹಾಕುವುದಕ್ಕೆ ನಾಜೂಕಿನ ವೇದಿಕೆಯೊಂದು ಸಜ್ಜುಗೊಂಡಿದೆ.

Advertisement

ಡೊನಾಲ್ಡ್‌ ಟ್ರಂಪ್‌ ಸರ್ಕಾರದ “ಬೈ ಅಮೆರಿಕನ್‌, ಹೈರ್‌ ಅಮೆರಿಕನ್‌’ ಆಶಯಕ್ಕೆ ತಕ್ಕಂತೆ, ವೀಸಾ ಹಾಗೂ ಪೌರತ್ವ ಅಧಿಕಾರ ಹೊಂದಿರುವ ಅಮೆರಿಕದ ಆಂತರಿಕ ಭದ್ರತಾ ಇಲಾಖೆ (ಡಿಎಚ್‌ಎಸ್‌) ಹೊಸ ಪ್ರಸ್ತಾವನೆ ಯೊಂದನ್ನು ಸಿದ್ಧಗೊಳಿಸಿದೆ. ಅದರಲ್ಲಿ, ಎಚ್‌1ಬಿ ವೀಸಾದಡಿ ಅಮೆರಿಕದಲ್ಲಿರುವ ವಿದೇಶಿಗರಿಗೆ ಆ ವೀಸಾದ ಅವಧಿ ವಿಸ್ತರಣೆಗೆ ಅವಕಾಶ ನೀಡುವ ನಿಯಮವನ್ನು ರದ್ದುಗೊಳಿಸುವ ಸಲಹೆಯನ್ನು ನೀಡಲಾಗಿದೆ. ಈಗಾಗಲೇ ಶಾಶ್ವತ ನಾಗರಿಕತ್ವದ (ಗ್ರೀನ್‌ ಕಾರ್ಡ್‌) ಅರ್ಜಿ ಸ್ವೀಕೃತಗೊಂಡಿರುವಂಥ ಉದ್ಯೋಗಿಗಳಿಗೂ ಈ ನಿಯಮ ಅನ್ವಯಿಸು ವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ. 

ಪ್ರಸ್ತುತ, ಎಚ್‌1ಬಿ ವೀಸಾದಡಿ ಸುಮಾರು 5 ಲಕ್ಷದಿಂದ 7.50 ಲಕ್ಷದಷ್ಟು ಭಾರತೀಯರು ಅಮೆರಿಕದಲ್ಲಿದ್ದಾರೆ. ಹಾಗೊಂದು ವೇಳೆ, ಈ ಪ್ರಸ್ತಾವನೆಗೆ ಟ್ರಂಪ್‌ ಸರ್ಕಾರದ ಮೊಹರು ಬಿತ್ತೆಂದರೆ, ಅಮೆರಿಕದಲ್ಲಿ ಭವ್ಯ ಭವಿಷ್ಯದ ಕನಸು ಕಾಣುತ್ತಿರುವ ಭಾರತೀಯ
ಮೂಲದ ಲಕ್ಷಾನುಲಕ್ಷ ಉದ್ಯೋಗಿಗಳ ಕುಟುಂಬಗಳು ತೊಂದರೆಗೆ ಸಿಲುಕಲಿವೆ ಎಂದು ವೀಸಾ ವಿಭಾಗದ ಸಿಬ್ಬಂದಿಯೊಬ್ಬರು 
ತಿಳಿಸಿದ್ದಾರೆ. ಅಮೆರಿಕದಲ್ಲಿರುವ ಉದ್ಯೋಗಗಳನ್ನು ಸ್ಥಳೀಯರಿಗೆ ದೊರಕುವಂತೆ ಮಾಡುವ ಉಪಾಯ ಇದರ ಹಿಂದಿನ ಉದ್ದೇಶ ಎನ್ನುವುದು ಗುಟ್ಟಿನ ವಿಚಾರವೇನಲ್ಲ. ಆದರೆ, ಅಮೆರಿಕದಲ್ಲಿ ನೆಲೆಸಿರುವ ವಿದೇಶಿಯರನ್ನು ಅದರಲ್ಲೂ ವಿಶೇಷವಾಗಿ ಭಾರತೀಯರು ಸ್ವಯಂ ಪ್ರೇರಿತರಾಗಿ ಜಾಗ ಖಾಲಿ ಮಾಡುವಂತೆ ಪ್ರೇರೇಪಿಸುವ ತಂತ್ರ ಈ ಪ್ರಸ್ತಾವನೆ ಹಿಂದಿದೆ ಎಂದೂ ಹೇಳಲಾಗಿದೆ.

85,000
ಪ್ರತಿ ವರ್ಷ ಅಮೆರಿಕ ಸರ್ಕಾರ ನೀಡುವ ಎಚ್‌1ಬಿ ವೀಸಾ ಸಂಖ್ಯೆ

65,000
ವಿದೇಶಿ ಉದ್ಯೋಗಿಗಳಿಗೆ ಮೀಸಲಿರುವ ವೀಸಾ ಪ್ರಮಾಣ

Advertisement

20,000
ವಿದೇಶಿ ವಿದ್ಯಾರ್ಥಿಗಳಿಗೆ ಮೀಸಲಿರುವ ಎಚ್‌1ಬಿ ವೀಸಾ 

5-7.5 ಲಕ್ಷ
ಎಚ್‌1ಬಿ ವೀಸಾದಡಿ ಇರುವ ಭಾರತ ಮೂಲದ ಉದ್ಯೋಗಿಗಳು

Advertisement

Udayavani is now on Telegram. Click here to join our channel and stay updated with the latest news.

Next