Advertisement
ಅಮೆರಿಕಾದಲ್ಲಿರುವವರಿಗೆ ಉದ್ಯೋಗ ದೊರಕಿಸಿಕೊಡುವ ಸಿದ್ಧತೆ ನಡೆಸಿರುವ ಟ್ರಂಪ್, ವಿದೇಶಿ (ಭಾರತ ಸೇರಿದಂತೆ) ಐಟಿ ಉದ್ಯೋಗಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಇದರಿಂದಾಗಿ ಅಮೆರಿಕ ಎಚ್ 1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿಗೊಳಿಸಿದೆ. ಅಮೆರಿಕದ ಎಚ್ 1 ಬಿ ವೀಸಾದ ಹೊಸ ನೀತಿಯಿಂದಾಗಿ ಭಾರತೀಯ ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋಗೆ ಭಾರೀ ಹೊಡೆತ ಬೀಳಲಿದೆ.
Related Articles
Advertisement
ವೀಸಾ ಪಡೆಯಲು ವಿದ್ಯಾರ್ಥಿಗಳಿಗೆ ಹಾಗೂ ತಾತ್ಕಾಲಿಕ ವೀಸಾದಾರರಿಗೆ ನಿಯಮಗಳನ್ನು ಸಡಿಲಿಸಲಾಗಿದೆ. ಫಲಾನುಭವಿಗಳ ಭತ್ಯೆಯಲ್ಲಿ ಕಡಿತಗೊಳ್ಳುವ ಹಣಕ್ಕೆ ಸಿಬ್ಬಂದಿ ಗಮನಕ್ಕೆ ತರುವುದನ್ನು ಈ ಕಾಯ್ದೆಯಲ್ಲಿ ಸೇರಿಸಲಾಗಿದೆ. ಇದರಿಂದ ತೆರಿಗೆ, ವೇತನ ಕಡಿತದ ಕಾರಣ ತಿಳಿಯಲು ನೆರವಾಗುತ್ತದೆ.
ಹಳೇ ಮಸೂದೆ ಪ್ರಕಾರ ಸಂಬಳ ಎಷ್ಟಿರಬೇಕಿತ್ತು?1989ರ ಮಸೂದೆ ಪ್ರಕಾರ ಎಚ್1 ಬಿ ವೀಸಾ ಪಡೆಯುವರು ಕನಿಷ್ಠ 60,000 ಅಮೆರಿನ್ ಡಾಲರ್ ಸಂಬಳ ಹೊಂದಿರಬೇಕಿತ್ತು. ಈ ಕಾಯ್ದೆ ಅಂದಿನಿಂದ ಯಾವುದೇ ಬದಲಾವಣೆ ಮಾಡದೆ ಮುಂದುವರಿಸಲಾಗಿತ್ತು. ಆದರೆ ಟ್ರಂಪ್ ಈಗ 60 ಸಾವಿರ ಅಮೆರಿಕನ್ ಡಾಲರ್ ಸಂಬಳವನ್ನು ದ್ವಿಗುಣಗೊಳಿಸಿ 1,30, 000 ಲಕ್ಷ ಅಮೆರಿಕನ್ ಡಾಲರ್ ಇರಬೇಕೆಂದು ನಿಗದಿಗೊಳಿಸಿದ್ದಾರೆ. ಭಾರತೀಯ ಐಟಿಗೆ ಬಿಗ್ ಶಾಕ್:
*ಅಮೆರಿಕದ ಎಚ್1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿ
*ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ
*ಎಚ್ 1 ಬಿ ವೀಸಾ ಪಡೆಯಲು ಕನಿಷ್ಠ 1 ಲಕ್ಷದ 30 ಸಾವಿರ ಅಮೆರಿಕನ್ ಡಾಲರ್ ಸಂಬಳ ಇರಬೇಕು
*ಅಮೆರಿಕ ಸಂಸತ್ ನಲ್ಲಿ ಮಹತ್ವದ ವೀಸಾ ತಿದ್ದುಪಡಿ ಮಸೂದೆ ಮಂಡನೆ
*ಬೆಂಗಳೂರಿಗರಿಗೆ ಭಾರೀ ಹೊಡೆತ ಸಾಧ್ಯತೆ