Advertisement

Gwalior; ಹೆತ್ತವರ ಮುಂದೆಯೇ 15ರ ಬಾಲಕಿಯ ಸಾಮೂಹಿಕ ಅತ್ಯಾಚಾರ!

12:01 PM Feb 01, 2024 | Team Udayavani |

ಗ್ವಾಲಿಯರ್: 15 ವರ್ಷ ಪ್ರಾಯದ ಬಾಲಕಿಯನ್ನು ಆಕೆಯ ಹೆತ್ತವರ ಎದುರುಗಡೆಯೇ ಗನ್ ಪಾಯಿಂಟ್ ನಲ್ಲಿ ಮೂವರು ಅತ್ಯಾಚಾರಗೈದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸೋಮವಾರ ರಾತ್ರಿ ಭನ್ವಾರ್ ಪುರ ಪ್ರದೇಶದಲ್ಲಿ ನಡೆದಿದೆ. ಆದರೆ ಎರಡು ದಿನಗಳ ಬಳಿಕ ಪೊಲೀಸರ ಬಳಿ ದೂರು ನೀಡಲಾಗಿದೆ ಎಂದು ಎಎಸ್ ಪಿ ರಿಶಿಕೇಷ್ ಮೀನಾ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಬಾಲಕಿಯ ಕುಟುಂಬವು ಒಂದು ತಿಂಗಳ ಹಿಂದೆಯಷ್ಟೇ ಈ ಸ್ಥಳಕ್ಕೆ ಬಂದಿತ್ತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next