Advertisement

ಅರುಣಾಚಲಕ್ಕೆ ಮೊದಲ ವಿಮಾನ

06:00 AM May 23, 2018 | Team Udayavani |

ಇಟಾನಗರ: ಅರಣಾಚಲ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ವಿಮಾನ ಸಂಪರ್ಕ ಲಭ್ಯವಾಗಿದೆ. ಸೋಮವಾರ ಪೂರ್ವ ಸಿಯಾಂಗ್‌ನಲ್ಲಿರುವ ಪಸಿಘಾಟ್‌ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಲ್ಯಾಂಡ್‌ ಆಗಿದೆ. ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ 25 ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಗುವಾಹಟಿಯಿಂದ ಪಸಿಘಾಟ್‌ಗೆ 42 ಸೀಟುಗಳ ಅಲಾಯನ್ಸ್‌ ಏರ್‌ಲೈನ್ಸ್‌ ಹಾರಾಟ ನಡೆಸಿದೆ.

Advertisement

ಮಂಗಳವಾರ, ಗುರುವಾರ ಹಾಗೂ ಶನಿವಾರ ಗಳಂದು ಕೋಲ್ಕತ್ತಾ-ಗುವಾಹಟಿ-ಪಸಿಘಾಟ್‌ಗೆ ಅಲಾಯನ್ಸ್‌ ಏರ್‌ ವಿಮಾನ ಪ್ರಯಾಣ ನಡೆಸಿದೆ. ಇದರಿಂದಾಗಿ ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಪೆಮಾ ಖಂಡು ಹೇಳಿದ್ದಾರೆ. ಶೀಘ್ರದಲ್ಲೇ ಲೊಹಿತ್‌ ಜಿಲ್ಲೆಯಲ್ಲಿ ತೆಜು ವಿಮಾನ ನಿಲ್ದಾಣವೂ ಕಾರ್ಯಾಚರಣೆ ನಡೆಸಲಿದ್ದು, ಝೂಮ್‌ ಏರ್‌ಲೈನ್ಸ್‌ ಕೂಡ ವಿಮಾನ ಹಾರಾಟ ನಡೆಸಲು ಸಿದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next