Advertisement

Guttigaru: ತೋಡಿಗೆ ಬಿದ್ದು ವೃದ್ಧೆ ಸಾವು

09:54 PM Aug 23, 2024 | Team Udayavani |

ಗುತ್ತಿಗಾರು: ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೃದ್ಧೆಯೊಬ್ಬರು ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಅಮರಮುಟ್ನೂರು ಗ್ರಾಮದ ಕುಂಟಿಹಿತ್ಲುವಿನಿಂದ ವರದಿಯಾಗಿದೆ.

Advertisement

ಇಲ್ಲಿನ ಕೋಣಕಜೆ ಸೀತಮ್ಮ(85) ಎಂಬವರೇ ಮೃತ ದುರ್ದೈವಿ.

ಸೀತಮ್ಮರವರು ಮನೆಯಲ್ಲಿ ನಾರ್ಣಕಜೆಗೆ ಹೋಗಿ ಬರುತ್ತೇನೆಂದು ಅ.21 ಬುಧವಾರದಂದು ಬೆಳಿಗ್ಗೆ 9 ಗಂಟೆಗೆ ಹೋಗಿದ್ದರು. ಆದರೆ ಅವರು ನಾರ್ಣಕಜೆಗೂ ಹೋಗದೇ, ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದರು. ಹೀಗಾಗಿ ಮನೆಯವರು ಹುಡುಕಾಟ ಆರಂಭಿಸಿದ್ದರು. ನಾರ್ಣಕಜೆ ಬಳಿಯ ಕುಂಟಿಹಿತ್ಲು ತೋಡಿನ ಮಧ್ಯೆ ಸೀತಮ್ಮರವರ ಮೃತದೇಹ ಪತ್ತೆಯಾಗಿದೆ.

ತೋಡು ದಾಟಿ ಹೋಗುವ ಸ್ಥಳದಿಂದ ಸ್ವಲ್ಪ ಕೆಳಭಾಗದಲ್ಲಿ ಕಲ್ಲಿನ ಮಧ್ಯೆ ಮೃತದೇಹ ಪತ್ತೆಯಾಗಿದೆ. ತೋಡು ದಾಟುವ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next