Advertisement

ಕೇರಳ ಗುರುವಾಯೂರು ದೇವಳಕ್ಕೆ ಬೆದರಿಕೆ ಕರೆ; ಬಿಗಿ ಭದ್ರತೆ

04:30 PM May 20, 2017 | udayavani editorial |

ಗುರುವಾಯೂರು, ಕೇರಳ : ಇಲ್ಲಿನ ಪ್ರಸಿದ್ಧ  ಶ್ರೀಕೃಷ್ಣ ದೇವಾಲಯವನ್ನು ನಾಶಪಡಿಸುವ ಬೆದರಿಕೆಯ ಫೋನ್‌ ಕರೆಗಳು ಬಂದುದನ್ನು ಅನುಸರಿಸಿ ದೇವಾಲಯಕ್ಕಿರುವ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದ್ದು ಕಟ್ಟೆಚ್ಚರ ಘೋಷಿಸಲಾಗಿದೆ.

Advertisement

ಇಂದು ಬೆಳಗ್ಗೆ ದೇವಾಲಯಕ್ಕೆ ಅನಾಮಿಕನೊಬ್ಬನ ಫೋನ್‌ ಕರೆ ಬಂದಿತ್ತು. ಅದರಲ್ಲಾತ ದೇವಾಲಯದ ಆಡಳಿತೆಯಲ್ಲಿ ಭ್ರಷ್ಟಾಚಾರವಿದೆ ಎಂದು ಗುಡುಗಿದ್ದ. 

ಅದಾಗಿ ದೇವಸ್ಥಾನದ ಆಡಳಿತ ವರ್ಗದವರು “ದೇವಾಲಯವನ್ನು ನಾಶಪಡಿಸುವ ಬೆದರಿಕೆಯ ಫೋನ್‌ ಕರೆ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದರು. ಒಡನೆಯೇ ಪೊಲೀಸರು ಕೇಸು ದಾಖಲಿಸಿಕೊಂಡು ದೇವಾಲಯದ ಭದ್ರತೆಯನ್ನು ಬಿಗಿಗೊಳಿಸಿದರು. ಜತೆಗೆ ದೇವಾಲಯಕ್ಕೆ ಬಂದ ಫೋನ್‌ ಕರೆಗಳ ವಿವರಗಳನ್ನು ಪಡೆಯಲು ಮುಂದಾದರು. 

ದೇವಾಲಯಕ್ಕೆ ಈಗ ಹೆಚ್ಚುವರಿ ಪೊಲೀಸ್‌ ಸಿಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next