Advertisement
ಉಜಿರೆ ಎಸ್‌ಡಿಎಂ ಕಾಲೇಜು ವತಿಯಿಂದ ಬುಧವಾರ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ 2021-22ನೇ ಸಾಲಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿ ಮಾತನಾಡಿದರು.
Related Articles
Advertisement
ಉಪಪ್ರಾಂಶುಪಾಲ ಡಾ| ಎ. ಜಯಕುಮಾರ್ ಶೆಟ್ಟಿ ವಾರ್ಷಿಕ ವರದಿ ಸಾದರ ಪಡಿಸಿದರು. ಪ್ರಾಂಶುಪಾಲ ಡಾ| ಪಿ.ಎನ್. ಉದಯಚಂದ್ರ ಸ್ವಾಗತಿಸಿದರು. ಕಲಾ ವಿಭಾಗ ಡೀನ್ ಡಾ| ಶಲೀಪ್ ಕುಮಾರಿ ವಂದಿಸಿದರು. ಪ್ರಾಧ್ಯಾಪಕ ಡಾ| ಕುಮಾರ್ ಹೆಗ್ಡೆ ಬಿ.ಎ. ಡಾ| ಚಿತ್ರಾ ಮತ್ತು ಡಾ| ನೆಫಿಸೆತ್ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಗೌರವರಾಜ್ಯಸಭಾ ಸದಸ್ಯರಾಗಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಉಜಿರೆಯ ರಸ್ತೆಯನ್ನು ಸುಂದರಗೊಳಿಸಿರುವ ಶಾಸಕ ಹರೀಶ್ ಪೂಂಜ ಮತ್ತು ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿ ಅವ ರನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು. ಸಾರ್ಥಕ, ಪುಣ್ಯದ ಕ್ಷಣ
ಸಮ್ಮಾನ ಸ್ವೀಕರಿಸಿದ ಗುರುರಾಜ್ ಮಾತನಾಡಿ, ನಿರ್ದಿಷ್ಟ ಗುರಿಯೊಂದಿಗೆ ಯಾವುದೇ ಕ್ಷೇತ್ರದಲ್ಲಿ ಕಠಿನ ಪರಿಶ್ರಮ ಮತ್ತು ನಿರಂತರ ಅಭ್ಯಾಸ ಮಾಡಿದಲ್ಲಿ ಯಶಸ್ಸು ಖಚಿತ. ಪದಕ ಗೆದ್ದು ಮರಳಿದಾಗ ಡಾ| ಹೆಗ್ಗಡೆಯವರು ವಿಮಾನ ನಿಲ್ದಾಣದಲ್ಲಿ ಗೌರವಿಸಿದ್ದು ಸಾರ್ಥಕ ಪುಣ್ಯ ಕ್ಷಣವಾಗಿದೆ. 2010ರಿಂದ 5 ವರ್ಷಗಳ ಕಾಲ ನಾನು ಎಸ್‌ಡಿಎಂ ಕಾಲೇಜಿನಲ್ಲಿ ಪಡೆದ ತರಬೇತಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್ ಎಚ್., ಶಾರದಾ ಮತ್ತು ರಾಜೇಂದ್ರ ಪ್ರಸಾದ್ ಅವರ ನಿರಂತರ ತರಬೇತಿ ಮತ್ತು ಪ್ರೋತ್ಸಾಹವೂ ಇದರ ಹಿಂದೆ ಇದೆ ಎಂದರು.